More

    ಕೊಪ್ಪಳ ಮತದಾನದಲ್ಲಿ ಪುರುಷರೇ ಮುಂದು

    ಕೊಪ್ಪಳ: ಕಳೆದೆರೆಡು ತಿಂಗಳಿನಿಂದ ಶುರುವಾಗಿದ್ದ ದೇಶದ ಬಹುದೊಡ್ಡ ಚುನಾವಣಾ ಹಬ್ಬ ಮಂಗಳವಾರ ಮತದಾನ ಮೂಕಕ ಬಹುತೇಕ ಪೂರ್ಣಗೊಂಡಿದೆ. ಜೂನ್​ 4ರಂದು ಮತ ಎಣಿಕೆ ನಡೆಯಲಿದ್ದು, ಕ್ಲೆಮ್ಯಾಕ್ಸ್​ಗೆ ಇನ್ನು ಒಂದೇ ಹಂತ ಬಾಕಿ ಉಳಿಯುವಂತಾಗಿದೆ.

    ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ನಡೆದ ಮತದಾನದಲ್ಲಿ 13,24,898 (ಶೇ.70.99)ಮತದಾರರು ಮತ ಚಲಾಯಿಸಿದ್ದು, ಕಳೆದ ಚುಣಾವಣೆಗಿಂತ ಅಧಿಕ ಮತದಾನವಾಗಲು ಕಾರಣರಾಗಿದ್ದಾರೆ. ಸಿಂಧನೂರು, ಮಸ್ಕಿ, ಸಿರಗುಪ್ಪ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕೊಪ್ಪಳ ವಿಧಾನಸಭಾ ಕ್ಷೇತ್ರಗಳ 2,045 ಮತಗಟ್ಟೆಗಳಲ್ಲಿ ಮತದಾನವಾಗಿದೆ. 9,19,499 ಪುರುಷ, 9,46,763 ಮಹಿಳೆ, ಇತರ 135, ಒಟ್ಟು 18,66,397 ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದರು. ಇವರಲ್ಲಿ 6,69,583 ಪುರುಷ, 6,55,275 ಮಹಿಳೆ, ಇತರ 40, ಒಟ್ಟು 13,24,898 ಮತದಾರರು ಹಕ್ಕು ಚಲಾಯಿಸಿದ್ದಾರೆ.

    ಕುಷ್ಟಗಿಯಲ್ಲಿ 1,21,526 ಪುರುಷ, 1,20,747 ಮಹಿಳೆ, 10 ಇತರ, ಒಟ್ಟು 2,42,283 ಮತದಾರರಿದ್ದು, ಇದರಲ್ಲಿ 85,312 ಪುರುಷ, 82,561 ಮಹಿಳೆ, ಇಬ್ಬರು ಇತರ ಒಟ್ಟು 1,67,875 ಮತದಾರರು (ಶೇ.69.29) ಮತದಾನ ಮಾಡಿದ್ದಾರೆ. ಕನಕಗಿರಿಯಲ್ಲಿ 1,13,268 ಪುರುಷ, 1,17,408 ಮಹಿಳೆ, 12 ಇತರ ಒಟ್ಟು ಒಟ್ಟು 2,30,688 ಮತದಾರರಿದ್ದು, 85,335 ಪುರುಷ, 84,009 ಮಹಿಳೆ, 4 ಇತರ ಸೇರಿ 1,69,348 (ಶೇ.73.41) ಜನರು ಮತ ಹಾಕಿದ್ದಾರೆ.

    ಗಂಗಾವತಿಯಲ್ಲಿ 1,02,986 ಪುರುಷ, 1,06,250 ಮಹಿಳೆ, 14 ಇತರ ಒಟ್ಟು 2,09,250 ಮತದಾರರಿದ್ದು, ಇವರಲ್ಲಿ 79,998 ಪುರುಷ, 78,074 ಮಹಿಳೆ, 4 ಇತರ, ಒಟ್ಟು 1,58,076 (ಶೇ.75.54) ಮತದಾರರು ಮತದಾನ ಮಾಡಿದರೆ, ಯಲಬುರ್ಗಾದಲ್ಲಿ 1,14,805 ಪುರುಷ, 1,15,463 ಮಹಿಳೆ, 6 ಇತರ ಒಟ್ಟು 2,30,274 ಮತದಾರರಿದ್ದು, 86,955 ಪುರುಷ, 82,817 ಮಹಿಳೆ, 3 ಇತರ ಒಟ್ಟು 1,69,775 (ಶೇ.73.73) ಮತದಾರರು ಹಕ್ಕು ಚಲಾಯಿಸಿದ್ದಾರೆ.

    ಕೊಪ್ಪಳದಲ್ಲಿ 1,30,831 ಪುರುಷ, 1,34,617 ಮಹಿಳೆ, 17 ಇತರ ಒಟ್ಟು 2,65,465 ಮತದಾರರಿದ್ದು, ಇದರಲ್ಲಿ 1,00,006 ಪುರುಷ, 96,367 ಮಹಿಳೆ, 3 ಇತರ ಒಟ್ಟು 1,96,376 (ಶೇ.73.97) ಮತದಾರರು ಮತದಾನ ಮಾಡಿದ್ದಾರೆ. ಸಿಂಧನೂರಿನಲ್ಲಿ 1,20,300 ಪುರುಷ, 1,26,958 ಮಹಿಳೆ, 24 ಇತರ ಒಟ್ಟು 2,47,282 ಮತದಾರರಿದ್ದು, ಇವರಲ್ಲಿ 81,783 ಪುರುಷ, 81,714 ಮಹಿಳೆ, 4 ಇತರ ಒಟ್ಟು 1,63,501 (ಶೇ.66.12) ಮತದಾರರು ಮತ ಚಲಾಯಿಸಿದ್ದಾರೆ.

    ಮಸ್ಕಿಯಲ್ಲಿ 1,05,516 ಪುರುಷ, 1,10,302 ಮಹಿಳೆ, 8 ಇತರ ಒಳಗೊಂಡು ಒಟ್ಟು 2,15,826 ಮತದಾರರಿದ್ದು, 69,930 ಪುರುಷ, 69,615 ಮಹಿಳೆ, 2 ಇತರ ಒಟ್ಟು 1,39,547 (ಶೇ.64.66) ಮತದಾರರು ಮತದಾನ ಮಾಡಿದರೆ, ಸಿರಗುಪ್ಪದಲ್ಲಿ 1,10,267 ಪುರುಷ, 1,15,018 ಮಹಿಳೆ, 44 ಇತರ ಒಟ್ಟು 2,25,329 ಮತದಾರರಿದ್ದು, 80,264 ಪುರುಷ, 80,118 ಮಹಿಳೆ, 18 ಇತರ ಒಟ್ಟು 1,60,400 (ಶೇ.71.18) ಮತದಾರರು ಮತದಾನ ಮಾಡಿದ್ದಾರೆ.

    ಮಹಿಳೆಯರು ಹಿಂದೆ
    ಕ್ಷೇತ್ರದಲ್ಲಿ 9,19,499 ಪುರುಷ ಮತದಾರರಿದ್ದರೆ, 9,46,763 ಮಹಿಳಾ ಮತದಾರರಿದ್ದಾರೆ. ಪುರುಷರಿಗಿಂತ 27,264 ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಮತದಾನ ಮಾಡುವಲ್ಲಿ ಮಾತ್ರ ಪುರುಷರೇ ಅಧಿಕವಾಗಿದ್ದಾರೆ. 6,69,583 ಪುರುಷ, 6,55,275 ಮಹಿಳೆಯರು ಮತ ಚಲಾಯಿಸಿದ್ದು, ಮಹಿಳೆಯರಿಗಿಂತ 14,308 ಪುರುಷ ಮತದಾರರು ಹೆಚ್ಚಾಗಿ ಮತದಾನ ಮಾಡಿದ್ದು, ಮಹಿಳೆಯರನ್ನು ಹಿಂದಿಕ್ಕಿದ್ದಾರೆ. 135 ಇತರ ಮತದಾರರಲ್ಲಿ ಕೇವಲ 40 ಜನ ಹಕ್ಕು ಚಲಾಯಿಸಿದ್ದು, 95 ಜನ ಮತದಾನದಿಂದ ದೂರ ಉಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts