More

    ರಾಮಸೇತು ನಿರ್ಮಾಣಕ್ಕೆ 48 ಅಡಿ ಉದ್ದದ ಕೇಕ್‌ ಮೇಲೆ ಕಲ್ಲುಹೊತ್ತು ಸಾಗುತಿದೆ ವಾನರಸೇನೆ

    ಸೂರತ್‌: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಈಗಾಗಲೇ ಪಕ್ಷಬೇಧ, ಧರ್ಮಬೇಧ ಮರೆತು ಕೋಟ್ಯಂತರ ಮಂದಿ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಿದ್ದಾರೆ. ದೇಶಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ರಾಮನ ಭಕ್ತರು ನೆರವು ನೀಡಿದ್ದಾರೆ.

    ಇದೀಗ ಗುಜರಾತ್‌ನ ಸೂರತ್‌ನಲ್ಲಿ ಬೇಕರಿ ಒಂದು ಸೊಗಸಾದ ಕೇಕ್‌ ತಯಾರಿಸುವ ಮೂಲಕ ರಾಮನಿಗೆ ಸಿಹಿ ಸೇವೆಯನ್ನು ಒದಗಿಸಿದೆ. ’ಬೇಕರಿ ಚೈನ್‌’ ಮಳಿಗೆಯು 48 ಅಡಿ ಉದ್ದದ ಕೇಕ್‌ ತಯಾರಿಸಿದೆ. ಇದರ ಮೇಲೆ ‘ರಾಮ್ ಸೇತು ಕೇಕ್’ ಎಂದು ಬರೆಯಲಾಗಿದೆ.

    ಸೇತುವೆ ನಿರ್ಮಾಣಕ್ಕೆ ವಾನರ ಸೇನೆಯು ಕಲ್ಲು ಸಾಗಿಸುತ್ತಿರುವ ದೃಶ್ಯವನ್ನು ಕೇಕ್‌ ಮೇಲೆ ಸುಂದರವಾಗಿ ಚಿತ್ರಿಸಲಾಗಿದೆ. ಪ್ರತಿಯೊಂದು ಬಂಡೆಯ ಮೇಲೆ ಶ್ರೀರಾಮ್‌ ಶ್ರೀರಾಮ್‌ ಎಂದು ಬರೆದಿರುವುದನ್ನು ಬಂಡೆ ರೂಪದಲ್ಲಿ ಕೇಕ್‌ನಲ್ಲಿ ಬರೆಯಲಾಗಿದೆ.

    ಈ ಕೇಕ್‌ ಜತೆಗೆ ರಾಮ ಮಂದಿರ ತಯಾರಿಸಿದೆ ಮತ್ತು ಅಯೋಧ್ಯೆಯಲ್ಲಿ ರಾಮ್ ದೇವಾಲಯ ನಿರ್ಮಾಣಕ್ಕಾಗಿ 1,11,111 ರೂ.ದೇಣಿಗೆಯ ಜತೆ ಈ ಕೇಕ್‌ ಅನ್ನು ನೀಡಲಾಗಿದೆ.

    “ರಾಮನ ದೇವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರು ಪ್ರೀತಿಯನ್ನು ವ್ಯಕ್ತಪಡಿಸಬೇಕು ಎಂಬ ಸಂದೇಶವನ್ನು ನಾವು ಕಳುಹಿಸಲು ಬಯಸುತ್ತೇವೆ” ಎಂದು ಬೇಕರಿಯ ನಿರ್ದೇಶಕರು ಹೇಳಿದ್ದಾರೆ.

    ದೇಹಕ್ಕೆ ಸುಸ್ತಾದರೆ ವಿಶ್ರಾಂತಿ ಬೇಕು, ಮನಸ್ಸಿಗೆ ಆಯಾಸವಾದರೆ…?

    ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮದರ್ಶನ ಅಂಕಣ: ಭಗವದ್ ಸಾಮೀಪ್ಯವೇ ಶ್ರೇಷ್ಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts