More

    ಕಿಕ್ಕೇರಿಯಲ್ಲಿ ರಾಮದೇವರ ಉತ್ಸವ

    ಕಿಕ್ಕೇರಿ: ಕುರುಹಿನಶೆಟ್ಟಿ ಹಳೇ ಭಜನೆಮನೆ ವತಿಯಿಂದ ಸೋಮವಾರ ರಾತ್ರಿ ಆಯೋಜಿಸಿದ್ದ ರಾಮೋತ್ಸವದಲ್ಲಿ ಸಮಾಜದ ಮುಖಂಡರು, ವಿವಿಧ ಸಮುದಾಯದ ಭಕ್ತರು ಭಾಗವಹಿಸಿದ್ದರು.

    ರಾಮೋತ್ಸವಕ್ಕೂ ಮುನ್ನ 9ದಿನ ನಿತ್ಯ ದೇವರಿಗೆ ಪುಷ್ಪಾರ್ಚನೆ, ದೀಪಾರ್ಚನೆ, ರಾಮನಾಮ ಕೀರ್ತನೆ ಸೇವೆ, ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

    ನವಮಿಯ 9ನೇ ದಿನ ಮೂಲವಿಗ್ರಹಕ್ಕೆ ಅಭಿಷೇಕ ನಡೆಯಿತು. ಗಂಜೀಫಾ ಚಿತ್ರಕಲೆಯಲ್ಲಿ ಪಟ್ಟಾಭಿರಾಮದೇವರ ಭಾವಚಿತ್ರವನ್ನು ವಿವಿಧ ಪರಿಮಳ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ರಾಮಮಂದಿರದ ಒಳ, ಆವರಣಗಳನ್ನು ತಳಿರು ತೋರಣ, ರಂಗವಲ್ಲಿಗಳಿಂದ ಅಲಂಕರಿಸಲಾಗಿತ್ತು.

    ರಾಮದೇವರ ಉತ್ಸವವನ್ನು ಬೆಳ್ಳಿಸಾರೋಟಿನಲ್ಲಿ ಕೋಟೆ ಗಣಪತಿ, ರಥಬೀದಿ, ಹೊಸಬೀದಿ, ಕೆ.ಎಸ್. ನರಸಿಂಹಸ್ವಾಮಿ ಬೀದಿ, ಸುಬ್ಬರಾಯಛತ್ರ, ಬ್ರಹ್ಮೇಶ್ವರ ಮತ್ತಿತರ ಬೀದಿಗಳಲ್ಲಿ ಮಂಗಳವಾದ್ಯ, ಬಾಣಬಿರುಸಿನೊಂದಿಗೆ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಭಕ್ತರು ಶ್ರೀರಾಮ ಜೈ ಎಂದು ಸ್ಮರಣೆ ಮಾಡಿದರು.

    ಮುಖಂಡರಾದ ಕೆ.ವಿ. ಅರುಣಕುಮಾರ್, ಅಣ್ಣಯ್ಯ, ಕೆ.ವಿ.ಕುಮಾರ್, ಹನುಮಂತಶೆಟ್ಟಿ, ಹರ್ಷ, ವೆಂಕಟೇಶ್, ಶ್ರೀನಿವಾಸ್, ಶಂಕರಶೆಟ್ಟಿ, ನಾಗೇಶ್, ಗೋವಿಂದ, ಮಾರುತಿ ವೆಂಕಟೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts