More

  ಕೆ.ಲಿಂಗರಾಜು ಕೊಪ್ಪ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ

  ಮದ್ದೂರು: ತಾಲೂಕಿನ ಕೊಪ್ಪ ಗ್ರಾಮದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೊಪ್ಪದ ಕೆ.ಲಿಂಗರಾಜು ಅವಿರೋಧವಾಗಿ ಆಯ್ಕೆಯಾದರು.

  ಹಿಂದಿನ ಅಧ್ಯಕ್ಷ ಚಿಕ್ಕೋನಹಳ್ಳಿ ರಾಮಕೃಷ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಕೆ.ಲಿಂಗರಾಜು ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಡಿ.ಆಶಾ ವಿರೋಧ ಆಯ್ಕೆ ಘೋಷಿಸಿದರು.

  ಸಂಘದ ನಿರ್ದೇಶಕರು, ಗ್ರಾಮಸ್ಥರು ಹಾಗೂ ರೈತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಕೆ.ಲಿಂಗರಾಜು, ನಿರ್ದೇಶಕರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸಹಕಾರ ಸಂಘದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

  ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ನಾನು ಕಾರ್ಯಪ್ರವೃತ್ತನಾಗಲಿದ್ದು, ರೈತರಿಗೆ ಸಕಾಲಕ್ಕೆ ರಸಗೊಬ್ಬರ ಪೂರೈಕೆ, ಸಾಲ ವಿತರಣೆ, ಷೇರುದಾರರಿಗೆ ಸಲ್ಲಬೇಕಾದ ಎಲ್ಲ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಲಾಗುವುದು. ಆ ಮೂಲಕ ಸಂಘವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಇಂಗಿತ ಹೊಂದಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಕೆ.ಲಿಂಗರಾಜು ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಿರ್ದೇಶಕರು ಮತ್ತು ಕಾಂಗ್ರೆಸ್ ಮುಖಂಡರು ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

  ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ. ಜೋಗಿಗೌಡ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ಕೊಪ್ಪ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷೆ ಲಕ್ಷ್ಮಮ್ಮ ಈರೇಗೌಡ, ನಿರ್ದೇಶಕರಾದ ಕೆ.ರಮೇಶ್ ಕೊಪ್ಪ, ಎಚ್.ವಿ. ಶಿವಣ್ಣ, ಕೆ.ಜೆ.ಕೃಷ್ಣೇಗೌಡ, ರಾಮಕೃಷ್ಣ, ಟಿ.ಕಾಂತರಾಜು, ಕೆ.ಜಿ. ಜಯರಾಮು, ಶಿವಲಿಂಗೇಗೌಡ, ಜಿ.ಪಿ.ಮಂಜುಳಾ, ಚಂದ್ರಶೇಖರ್, ಟಿ.ಪುಟ್ಟಸ್ವಾಮಿ, ರವಿ, ಡಿಸಿಸಿ ಬ್ಯಾಂಕ್ ವೃತ್ತ ಮೇಲ್ವಿಚಾರಕ ರವೀಂದ್ರ ಕುಮಾರ್, ಸಿಇಒ ಎಂ.ಮಹಾದೇವ, ಸಿಬ್ಬಂದಿ ಕೆ.ಅಶೋಕ್, ಜೆ.ಶ್ರುತಿ, ಟಿಎಪಿಸಿಎಂಎಸ್ ನಿರ್ದೇಶಕ ಹರಳಕೆರೆ ಕರಿಯಪ್ಪ, ತಾ.ಪಂ ಮಾಜಿ ಉಪಾಧ್ಯಕ್ಷ ಬಿ.ಎಂ.ರಘು, ಸದಸ್ಯ ತೋಯಜಾಕ್ಷ, ಗ್ರಾ.ಪಂ ಅಧ್ಯಕ್ಷ ರುದ್ರೇಶ್, ಸದಸ್ಯರಾದ ಕುಮಾರ್ ಕೊಪ್ಪ, ಕೆ.ಎಂ. ಪರ್ವೀಜ್ ಅಹಮದ್, ಗಿರೀಶ್, ನವೀನ, ಮುಖಂಡರಾದ ಸಿ.ಎಸ್.ರವಿ. ಕೆ.ಯೋಗನಂದ, ಬಿ.ಸಿ. ಸತೀಶ್, ಸಿ. ತಮ್ಮಯ್ಯ, ಎಂ.ಬಿ. ವೆಂಕಟೇಶ, ವಾಸು, ಕಾಂತರಾಜು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts