ಸ್ನೇಹಿತರೊಂದಿಗೆ ಬೆಟ್ ಕಟ್ಟಿ ಅತಿಯಾಗಿ ತಿಂದು ಪ್ರಾಣ ಬಿಟ್ಟ!

Momos
Published on

ನವದೆಹಲಿ: ತಿನ್ನುವ ಸ್ಪರ್ಧೆ ಹಲವೆಡೆ ನಡೆಯುತ್ತಿರುತ್ತದೆ. ಯಾರು ಹೆಚ್ಚು ಇಡ್ಲಿ-ರಾಗಿಮುದ್ದೆ ತಿನ್ನುತ್ತಾರೆ ಎಂಬಂಥ ಸ್ಪರ್ಧೆಗಳು ಸರ್ವೇಸಾಮಾನ್ಯ. ಅಂಥದ್ದೇ ಒಂದು ಸ್ಪರ್ಧೆಯಿಂದಾಗಿ ಇಲ್ಲೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈತ ಮೊಮೋಸ್​ಗಳನ್ನು ತಿಂದು ಮರಣ ಹೊಂದಿದ್ದಾನೆ.

ವಿಪಿನ್ ಕುಮಾರ್ ಎಂಬ 25 ವರ್ಷದ ಯುವಕ ತನ್ನ ಸ್ನೇಹಿತರೊಂದಿಗೆ ಪಂಥ ಕಟ್ಟಿ ತಿಂದು ಸಾವಿಗೀಡಾಗಿದ್ದಾನೆ. ಬಿಹಾರದ ಗೋಪಾಲ್​ಗಂಜ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಈತ ಗುರುವಾರ ತನ್ನ ಸ್ನೇಹಿತರೊಂದಿಗೆ ಮೊಮೋಸ್ ತಿನ್ನುವ ವಿಚಾರವಾಗಿ ಬೆಟ್ ಕಟ್ಟಿದ್ದು, ಅತಿಯಾಗಿ ಮೊಮೋಸ್ ತಿಂದು ಅಸ್ವಸ್ಥಗೊಂಡಿದ್ದ. ಅಲ್ಲೇ ಎಚ್ಚರ ತಪ್ಪಿ ಬಿದ್ದು ಸಾವಿಗೀಡಾಗಿದ್ದ.

ಆದರೆ ಈ ಸಾವಿನ ಹಿಂದೆ ಸ್ನೇಹಿತರ ಷಡ್ಯಂತ್ರ ಇದೆ. ಅವರು ವಿಷಪೂರಿತ ಆಹಾರ ಕೊಟ್ಟು ಬೆಟ್​ ನೆಪದಲ್ಲಿ ತಿನ್ನಿಸಿದ್ದಾರೆ ಎಂದು ವಿಪಿನ್ ತಂದೆ ಆರೋಪಿಸಿದ್ದಾರೆ. ಪೊಲೀಸರು ವಿಪಿನ್ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net