ಮರದಿಂದ ರಕ್ತ ಸುರಿಯುತ್ತಿದೆ; ಭೂಮಿಯ ಮೇಲೆ ಈ ರೀತಿ ಮರಗಳಿವೆಯೇ ಎಂದ್ರು ನೆಟ್ಟಿಗರು

tree
Published on

ನವದೆಹಲಿ: ಪ್ರಾಣಿ, ಪಕ್ಷಿ, ಮನುಷ್ಯರ ದೇಹದಲ್ಲಿ ಎಲ್ಲಿಯಾದರೂ ಗಾಯವಾಗಿದ್ದರೆ, ರಕ್ತಸ್ರಾವ ಆಗುತ್ತದೆ. ಆದರೆ ಮರ ಕಡಿದರೆ ಮನುಷ್ಯರಂತೆ ಕೆಂಪಗೆ ರಕ್ತ ಬರುತ್ತದೆ ಎನ್ನುವ ಸುದ್ದಿಯನ್ನು ನಂಬಲು ಕಷ್ಟವಾದ್ರು ಸತ್ಯ. ಸದ್ಯ ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ವ್ಯಕ್ತಿಯೊಬ್ಬ ಚಾಕುವಿನಿಂದ ಮರವನ್ನು ಕತ್ತರಿಸಿದಾಗ ಕೆಂಪು ರಕ್ತ ಹೊರಬರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಅದೇ ರೀತಿ ಮತ್ತೊಂದು ಸ್ಥಳದಲ್ಲಿ ಚಾಕುವಿನಿಂದ ಕತ್ತರಿಸಿದಾಗ ಆ ಸ್ಥಳದಲ್ಲೂ ರಕ್ತ ಬರುತ್ತಿರುವುದು ಕಂಡು ಬಂದಿದೆ. ಈಗ ಅದು ಯಾವ ಮರ ಎಂದು ಆಶ್ಚರ್ಯವಾಗುತ್ತಿದೆ. ಈ ಮರದ ಒಳಭಾಗದಲ್ಲಿ ಮನುಷ್ಯರಂತೆ ರಕ್ತ ತುಂಬಿದೆ ಎಂದು ಹೇಳಲಾಗುತ್ತದೆ. 

ಇದು ಬ್ಲಡ್ ವುಡ್ ಟ್ರೀ ಆಗಿದೆ. ಈ  ಮರಗಳಲ್ಲಿ ಕಂಡುಬರುವ ಕೆಂಪು ದ್ರವವು ವಾಸ್ತವವಾಗಿ ರಕ್ತದಂತೆ ಕಾಣುವ ಗಾಢ ಕೆಂಪು ಬಣ್ಣದ ರಸವಾಗಿದೆ. ಇದನ್ನು ವೈಜ್ಞಾನಿಕವಾಗಿ 'ಕಿನೋ' ಎಂದು ಕರೆಯಲಾಗುತ್ತದೆ. ಈ ರಸವು ಟ್ಯಾನಿನ್ ಎಂಬ ಸಂಯುಕ್ತದಿಂದ ಸಮೃದ್ಧವಾಗಿದೆ. ಇದು ರಕ್ತದಂತಹ ಬಣ್ಣವನ್ನು ನೀಡುತ್ತದೆ.

ಈ  ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ 17 ಸೆಕೆಂಡ್ ಗಳಿರುವ ಈ ವಿಡಿಯೋ ಇದುವರೆಗೆ 8 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದ್ದು, 17 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. 'ಮರದಿಂದ ರಕ್ತ ಬರುತ್ತಿದೆ.. ಎಂದರೆ ಅದು ಜೀವಂತವಾಗಿದೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net