ಹೊಲದಲ್ಲಿ ಮಾವಿನಕಾಯಿ ಕಿತ್ತಿದ್ದಕ್ಕೆ ವ್ಯಕ್ತಿಯ ಹತ್ಯೆ; ಆರೋಪಿಗಳು ಪರಾರಿ

Crime News
Published on

ಜೈಪುರ: ಮಾವಿನ ಕಾಯಿ ಕೀಳುತ್ತಿದ್ದ ಎಂಬ ಆರೋಪದ ಮೇಲೆ ವ್ಯಕ್ತಿ ಒಬ್ಬನನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ಸೂರಜ್​ ಕರಣ್​ ಮೀನಾ ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು ಘಟನೆ ಸಂಬಂಧ 5 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾವಿನಕಾಯಿ ಕಿತ್ತಿದ್ದಕ್ಕೆ ಕೊಲೆ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರತ್ಯಕ್ಷದರ್ಶಿ ಮಹಾವೀರ್​ ಮಾವಿನ ಕಾಯಿ ಕೀಳುತ್ತಿದ್ದ ಎಂವ ಕಾರಣಕ್ಕೆ ಅವನ ಮೇಲೆ ಅಮಾನುಷವಾಗಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದರು.

beating

ನಂದಲಾಲ್​ ಬೈರ್ಯ ಎಂಬುವವರ ಜಮೀನಲ್ಲಿ ಇದ್ದ ಮಾವಿನ ಮರದಿಂದ ಹಣ್ಣನ್ನು ಕೀಳಲು ಯತ್ನಿಸಿದ್ದಾರೆ. ಈ ವೇಳೆ ಆಗಮಿಸಿದ ಬೈರ್ಯ ಹಾಗೂ ಮೀನಾ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.

ಈ ವೇಳೆ ನಂದಲಾಲ್​ ತನ್ನ ಸಂಬಂಧಿಕರನ್ನು ಕರೆಸಿಕೊಂಡು ಮೀನಾರನ್ನು ಬೈಕಿನಲ್ಲಿ ರೊಲಾನ ಗ್ರಾಮಕ್ಕೆ ಕರೆದೊಯ್ದು ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.

ಘಟನೆ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮಹಾವೀರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net