ನಟ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣ; ಸಿಸಿಬಿ ಪೊಲೀಸರಿಂದ ಮಾಜಿ ಆಪ್ತನ ಬಂಧನ

Ramesh kichcha
Published on

ಬೆಂಗಳೂರು: ಖ್ಯಾತ ನಟ ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಬರೆದ ಪ್ರಕರಣ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟನ ಮಾಜಿ ಆಪ್ತನನ್ನು ಬಂಧಿಸಿದ್ದಾರೆ.

ಕಿಚ್ಚ ಚಾರಿಟಬಲ್ ಟ್ರಸ್ಟ್ ಮಾಜಿ ಅಧ್ಯಕ್ಷ ರಮೇಶ್ ಕಿಟ್ಟಿ ಬಂಧಿತ ಎಂದು ತಿಳಿದು ಬಂದಿದ್ದು ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಹಣಕಾಸು ವಿವಾದ

ಣಕಾಸು ವಿವಾದದ ಹಿನ್ನಲೆಯಲ್ಲಿ ಬೇಸರಗೊಂಡು ಸುದೀಪ್‌ಗೆ ಬೆದರಿಕೆ ಪತ್ರ ಬರೆದು ಬೆದರಿಸಿದ್ದಾಗಿ ವಿಚಾರಣೆಯಲ್ಲಿ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ನಟ ಸುದೀಪ್, ತಮ್ಮ ಸ್ನೇಹಿತರು ಮತ್ತು ಅಭಿಮಾನಿಗಳ ಜತೆ ಸೇರಿ ‘ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್’ ಅನ್ನು ಸ್ಥಾಪಿಸಿದ್ದಾರೆ. ಟ್ರಸ್ಟ್‌ಗೆ ರಮೇಶ್ ಕಿಟ್ಟಿ ಅಧ್ಯಕ್ಷನಾಗಿದ್ದ. ಟ್ರಸ್ಟ್‌ನಲ್ಲಿ 2 ಕೋಟಿ ರೂ. ಹೂಡಿಕೆ ಮಾಡಿದ್ದರು.

ramesh kitty

ಹಳೇ ವೈಷಮ್ಯ

ಟ್ರಸ್ಟ್‌ನ ಅಧ್ಯಕ್ಷ ಮತ್ತು ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಣವನ್ನು ಏಕಪಕ್ಷಿಯವಾಗಿ ಸುದೀಪ್ ಬಳಸುತ್ತಿದ್ದಾರೆ ಎಂದು ಕಿಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದ. ಇದೆ ವಿಚಾರಕ್ಕೆ ಸುದೀಪ್ ಮತ್ತು ಕಿಟ್ಟಿ ನಡುವೆ ಮನಸ್ತಾಪ ಉಂಟಾಗಿತ್ತು.

ಬೆಳವಣಿಗೆಯಿಂದ ಬೇಸತ್ತು ಕಿಟ್ಟಿ ಹೊರಬಂದಿದ್ದ. ಆನಂತರ ಸುದೀಪ್ ವಿರುದ್ಧ ಕಿಟ್ಟಿ ಹಗೆತನ ಸಾಧಿಸುತ್ತಿದ್ದ.ಮಾರ್ಚ್ 29ರಂದು ಜೆ.ಪಿ.ನಗರದ 6ನೇ ಹಂತದ ಕೆ.ಆರ್.ಲೇಔಟ್ 17ನೇ ಕ್ರಾಸ್‌ನಲ್ಲಿರು ಸುದೀಪ್ ಮನೆಗೆ ಅನಾಮೇಧಯ 2 ಪತ್ರಗಳನ್ನು ಬರೆದು ಖಾಸಗಿ ವಿಚಾರ ಬಹಿರಂಗ ಮಾಡುವುದಾಗಿ ಬೆದರಿಕೆ ಒಡ್ಡಿದ್ದ.

ಈ ಬಗ್ಗೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಸುದೀಪ್ ವ್ಯವಸ್ಥಾಪಕ ಜಾಕ್ ಮಂಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಯಿತು. ಹೆಚ್ಚಿನ ತನಿಖೆಯನ್ನು ಸಿಸಿಬಿ ಪೊಲೀಸರು ಕೈಗೊಂಡಿದ್ದರು.

ವಿಚಾರಣೆ ವೇಳೆ ಬೆಳಕಿಗೆ

ಬೆದರಿಕೆ ಪತ್ರ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಇನ್‌ಸ್ಪೆಕ್ಟರ್ ಭರತ್ ನೇತೃತ್ವದ ತಂಡವು, ಈ ಸಂಬಂಧ ಸುದೀಪ್ ಮತ್ತು ಅವರ ಕೆಲ ಆಪ್ತರನ್ನು ವಿಚಾರಣೆ ನಡೆಸಿತು.

ಟ್ರಸ್ಟ್ ವಿಚಾರದಲ್ಲಿ ಕಿಟ್ಟಿ ಮತ್ತು ಸುದೀಪ್ ನಡುವಿನ ಮನಸ್ತಾಪದ ಸಂಗತಿ ಬೆಳಕಿಗೆ ಬಂದಿದೆ. ಇದರ ಮೇರೆಗೆ ಪೊಲೀಸರು, ರಮೇಶ್ ಕಿಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net