ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನಿ ವ್ಯಕ್ತಿಯ ಬಂಧನ! 2 ಮೊಬೈಲ್ ಫೋನ್ ವಶಕ್ಕೆ

WhatsApp-Image-2024-04-01-at-7.52.12-PM-2
Published on

ಪಂಜಾಬ್: ಪಂಜಾಬ್‌ನ ಅಮೃತಸರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಬೇಲಿಯ ಬಳಿ ಗಡಿ ಭದ್ರತಾ ಪಡೆ (BSF) ಪಡೆಗಳು ಪಾಕಿಸ್ತಾನಿ ಪ್ರಜೆಯನ್ನು ಅನುಮಾನಸ್ಪದ ಚುಟುವಟಿಕೆಯ ಮೇರೆಗೆ ಬಂಧಿಸಿದ್ದು, ಆತನಿಂದ ನಗದು ಮತ್ತು ಎರಡು ಮೊಬೈಲ್​ ಫೋನ್​ಗಳನ್ನು ವಶಪಡಿಸಿಕೊಂಡಿದೆ.

ಮಾರ್ಚ್ 31ರ ಸಂಜೆ 5:45ರ ಸುಮಾರಿಗೆ ಗಡಿ ಬೇಲಿ ಬಳಿ ವ್ಯಕ್ತಿಯ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದ ಬಿಎಸ್ಎಫ್ ಪಡೆ, ಸೂಕ್ಷ್ಮವಾಗಿ ಆತನನ್ನು ಹಿಂಬಾಲಿಸಿದೆ. ಬಳಿಕ ಸಂಜೆ 6:05ಕ್ಕೆ ಸ್ಥಳವನ್ನು ಸುತ್ತುವರೆದು ಪಾಕಿಸ್ತಾನಿ ಪ್ರಜೆಯನ್ನು ಸೆರೆಹಿಡಿದಿದೆ.

ಅನುಮಾನಸ್ಪದ ವ್ಯಕ್ತಿಯಿಂದ ಎರಡು ಮೊಬೈಲ್ ಫೋನ್​ಗಳು, 840 ರೂಪಾಯಿ ಪಾಕಿಸ್ತಾನಿ ಕರೆನ್ಸಿ ನೋಟುಗಳು ಮತ್ತು ಒಂದು ಪಾಕಿಸ್ತಾನಿ ರಾಷ್ಟ್ರೀಯ ಗುರುತಿನ ಚೀಟಿಯನ್ನು ಬಿಎಸ್​ಎಫ್ ಪಡೆ ವಶಪಡಿಸಿಕೊಂಡಿದೆ. ಪ್ರಾಥಮಿಕ ವಿಚಾರಣೆಯ ನಂತರ, ಗಡಿ ಭದ್ರತಾ ಪಡೆ, ಪಾಕಿಸ್ತಾನಿ ಪ್ರಜೆಯನ್ನು ಹೆಚ್ಚಿನ ತನಿಖೆಗಾಗಿ ಪಂಜಾಬ್ ಪೊಲೀಸರಿಗೆ ವರ್ಗಾಯಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net