More

    ಪ್ರೆಸ್ಟೀಜ್ ಎಸ್ಟೇಟ್‌ನ ಷೇರು ಬೆಲೆ ಜಿಗಿತ: ಕಂಪನಿ 2,001 ಕೋಟಿ ರೂಪಾಯಿ ಸಂಗ್ರಹಿಸಿದ್ದೇಕೆ?

    ನವದೆಹಲಿ: ರಿಯಾಲ್ಟಿ ಸಂಸ್ಥೆ ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಲಿಮಿಟೆಡ್ ಷೇರುಗಳು ಸೋಮವಾರ ಅಂದಾಜು ಶೇಕಡಾ 8 ರಷ್ಟು ಜಿಗಿದಿವೆ.

    ನಾಲ್ಕು ಪ್ರಮುಖ ನಗರಗಳಲ್ಲಿ ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿ (ಎಡಿಐಎ) ಮತ್ತು ಕೊಟಕ್ ಎಐಎಫ್‌ನಿಂದ ಕಂಪನಿಯು 2,001 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ ಹಿನ್ನೆಲೆಯಲ್ಲಿ ಷೇರುಗಳಿಗೆ ಬೇಡಿಕೆ ಬಂದು ಬೆಲೆ ಏರಿಕೆಯಾಗಿದೆ.

    ಈ ಷೇರುಗಳು 7.68 ರಷ್ಟು ಏರಿಕೆಯಾಗಿ 1,259.80 ರೂ. ತಲುಪಿದವು. ಇಂಟ್ರಾ ಡೇ ವಹಿವಾಟಿನಲ್ಲಿ ಶೇಕಡಾ 8.78ರಷ್ಟು ಹೆಚ್ಚಳವಾಗಿ 1,272.70 ರೂ. ತಲುಪಿದ್ದವು.

    ಪ್ರೆಸ್ಟೀಜ್ ಗ್ರೂಪ್ ಕಂಪನಿಯು ತನ್ನ ಅಂಗಸಂಸ್ಥೆಗಳ ಮೂಲಕ “ವಸತಿ ವಲಯದಲ್ಲಿನ ಬೆಳವಣಿಗೆಯ ಅವಕಾಶಗಳನ್ನು ಲಾಭ ಮಾಡಿಕೊಳ್ಳಲು ADIA ಮತ್ತು Kotak AIF ಜತೆ ರೂ 2,001 ಕೋಟಿಗೆ (240 ಮಿಲಿಯನ್ ಡಾಲರ್​) ಹೆಗ್ಗುರುತು ಒಪ್ಪಂದವನ್ನು ಮಾಡಿಕೊಂಡಿದೆ” ಎಂದು ಹೇಳಿದೆ.

    ರೂ. 18,000 ಕೋಟಿ ಅಂದಾಜು ಆದಾಯದ ಸಂಭಾವ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಈ ನಿಧಿಯನ್ನು ಬಳಸಲಾಗುವುದು ಎಂದು ಅದು ಹೇಳಿದೆ.

    “ಈ ಮಾರ್ಕ್ಯೂ ಒಪ್ಪಂದವು ಪ್ರೆಸ್ಟೀಜ್ ಗ್ರೂಪ್‌ನ ಕಾರ್ಯಗತಗೊಳಿಸುವಿಕೆ ಮತ್ತು ಕಾರ್ಪೊರೇಟ್ ಆಡಳಿತದಲ್ಲಿ ಸಾಂಸ್ಥಿಕ ಹೂಡಿಕೆದಾರರ ವಿಶ್ವಾಸವನ್ನು ಒತ್ತಿಹೇಳುತ್ತದೆ. ಆದರೆ, ರಿಯಲ್ ಎಸ್ಟೇಟ್ ಅಭಿವೃದ್ಧಿ ಪ್ಯಾನ್-ಇಂಡಿಯಾದಲ್ಲಿ ಶ್ರೇಷ್ಠತೆಯನ್ನು ತಲುಪಿಸುವ ನಮ್ಮ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಪ್ರೆಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್ ಹೇಳಿದ್ದಾರೆ.

    ಕಂಪನಿಯು ಈ ನಿಧಿಯನ್ನು ಅರೆ-ಇಕ್ವಿಟಿ ರೂಪದಲ್ಲಿ ಸಂಗ್ರಹಿಸಿದೆ. ದೆಹಲಿ, ಮುಂಬೈ, ಗೋವಾ ಮತ್ತು ಬೆಂಗಳೂರಿನಲ್ಲಿ ನಾಲ್ಕು ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಬಳಸಲಾಗುತ್ತದೆ ಎಂದು ಪ್ರೆಸ್ಟೀಜ್ ಗ್ರೂಪ್ ಸಿಇಒ ವೆಂಕಟ್ ಕೆ. ನಾರಾಯಣ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts