More

  ಪ್ರಕಾಶ ರೈ ಪೂರ್ವಾಗ್ರಹ ಪೀಡಿತ ವ್ಯಕ್ತಿ; ಬಸವರಾಜ ಬೊಮ್ಮಾಯಿ


  ರಾಣೆಬೆನ್ನೂರ: ನಟ ಪ್ರಕಾಶ ರೈ ಪೂರ್ವಾಗ್ರಹ ಪೀಡಿತ ವ್ಯಕ್ತಿ. ಕಾಂಟ್ರವರ್ಸಿ ಮಾತುಗಳ ಮೂಲಕ ಸಾರ್ವಜನಿಕರ ಜೀವನದಲ್ಲಿ ಇರಬೇಕು ಎಂದು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಕೇಂದ್ರದಲ್ಲಿ ಆತಂಕವಾದಿಗಳ ಸರ್ಕಾರ ಇದೆ ಎಂದು ಹೇಳಿದ್ದಾರೆ. ಆದರೆ, ನಮ್ಮ ಮೋದಿಯವರು ಈಗಾಗಲೇ ಹೇಳಿದ್ದಾರೆ ಭಯೋತ್ಪಾದಕರಿಗೆ ನಾವು ಆತಂಕವಾದಿಗಳು ಅಂತಾ. ಇದನ್ನು ಅವರು ತಿಳಿದುಕೊಳ್ಳಲಿ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರಕಾಶ ರೈಗೆ ತೀರುಗೇಟು ನೀಡಿದರು.
  ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕಾಶ ರೈ ಏನೇ ಮಾತನಾಡಿದರೂ ಅಜೆಂಡಾ ಇಟ್ಕೊಂಡು ಮಾತನಾಡುತ್ತಾರೆ. ಅವರ ಮಾತಲ್ಲಿ ಯಾವುದೇ ಸತ್ಯಾಂಶ ಇಲ್ಲ. ಆತಂಕವಾದಿಗಳಿಗೆ ನಾವು ಆತಂಕವಾದಿಗಳು ಎಂದು ಈಗಾಗಲೇ ಮೋದಿ ಹೇಳಿದ್ದಾರೆ. ಭಯೋತ್ಪಾದಕರಿಗೆ ಆತಂಕವಾದಿಗಳಿಗೆ ಈ ನೆಲದ ಮೇಲೆ ಅವಕಾಶ ಇಲ್ಲ. ಭಯೋತ್ಪಾದಕ ಕೃತ್ಯ ಮಾಡಿದವರಿಗೆ ಭಯೋತ್ಪಾದಕ ಎನ್ನುತ್ತಿದ್ದಾರೆ. ಇದನ್ನು ಪ್ರಕಾಶ ರೈ ತಿಳಿದುಕೊಂಡರೆ ಒಳ್ಳೆಯದು ಎಂದರು.
  ಪ್ರಜ್ವಲ್ ರೇವಣ್ಣ ಪೇನ್‌ಡ್ರೈವ್ ವಿಚಾರದಲ್ಲಿ ಬಿಜೆಪಿ ನಾಯಕರ ಮೌನ ಕುರಿತು ಪ್ರತಿಕ್ರಿಯಿಸಿದ ಅವರು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತನಿಖೆಯಲ್ಲಿ ಎನ್‌ಐಎ ಬಂದರೂ ಕೂಡ ನಾವು ಒಪ್ಪಿಕೊಳ್ಳುತ್ತೇವೆ ಎಂದರು.
  ಪ್ರಜ್ವಲ್ ರೇವಣ್ಣಗೆ ಒಂದೇ ದಿನದಲ್ಲಿ ವೀಸಾ ಹೇಗೆ ಸಿಕ್ತು ಎಂಬ ವಿನಯ ಕುಲಕರ್ಣಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವೀಸಾ ಹೇಗೆ ಸಿಕ್ತು ಅಂತ ಕೇಳಿದರೆ ಹೇಗೆ? ಒಂದೇ ದಿನದಲ್ಲಿ ಸಿಗುತ್ತೆ? ಅವರು ಅರ್ಜಿ ಹಾಕಿದ್ದು, ಸಿಕ್ಕಿದ್ದು ಇವರು ನೋಡಿದ್ದಾರಾ? ಅವರು ಯಾವಾಗ ವೀಸಾಗೆ ಅರ್ಜಿ ಹಾಕಿದ್ದರು ಇವರಿಗೆ ಗೊತ್ತಾ? ವೀಸಾ ಜರ್ಮನಿ ಸರ್ಕಾರ ಕೊಡುತ್ತದೆ. ವೀಸಾ ಕೊಡುವುದು ಕೇಂದ್ರ ಸರ್ಕಾರದವರಲ್ಲ. ಇವರಿಗೆ ಕಾಮನ್ ಸೆನ್ಸ್ ಇರಬೇಕು ಅಷ್ಟು ಗೊತ್ತಿಲ್ಲವಾ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts