More

    ಕಾರ್ಮಿಕರ ಹಿತ ಕಾಪಾಡಿದ ಅಂಬೇಡ್ಕರ್​

    ವಿಜಯಪುರ: ಕಾರ್ಮಿಕರು ನಮ್ಮ ದೇಶದ ಬೆನ್ನೆಲುಬು. ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಕಾರ್ಮಿಕರಿಗಾಗಿ ಯಾವುದೇ ಸೌಲಭ್ಯಗಳು ಇರಲಿಲ್ಲ.

    ಮೊದಲು ದಿನದ 18 ಗಂಟೆ ಕೆಲಸ ಮಾಡಬೇಕಿತ್ತು. ಆದರೆ, ಸ್ವಾತಂತ್ರ ನಂತರ ಡಾ. ಬಾಬಾಸಾಹೇಬ ಅಂಬೇಡ್ಕರ್​ ಅವರು ಕಾರ್ಮಿಕರಿಗಾಗಿ ಹಲವಾರು ಯೋಜನೆ ಜಾರಿಗೆ ತಂದು ದಿನದಲ್ಲಿ 8 ಗಂಟೆ ಕೆಲಸ ಮಾಡುವ ಕಾಯ್ದೆ ಜಾರಿಗೆ ತಂದರು ಎಂದು ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಎಂ.ಎಸ್​. ಲೋಣಿ ಹೇಳಿದರು.

    ನಗರದ ಜಿಲ್ಲಾ ಕಾಂಗ್ರೆಸ್​ ಸಮಿತಿ ಕಾರ್ಯಾಲಯದಲ್ಲಿ ಬುಧವಾರ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರ ಅಭಿವೃದ್ಧಿಗೆ ಯಾವ ಕೊಡುಗೆಯೂ ನೀಡಿಲ್ಲ. ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದನೆಯೂ ಸಿಕ್ಕಿಲ್ಲ.

    ಆದನ್ನು ಕಾರ್ಮಿಕರು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು. ರಾಜ್ಯ ಕಾರ್ಮಿಕ ಟಕದ ಉಪಾಧ್ಯಕ್ಷ ರಾಜಶೇಖರ ಯಡಹಳ್ಳಿ, ನ್ಯಾಯವಾದಿ ಕೆ.ಎಫ್​. ಅಂಕಲಗಿ, ಸಾಹೇಬಗೌಡ ಬಿರಾದಾರ ಮತ್ತು ಪರ್ವೇಜ ಚಟ್ಟರಕಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್​ ಸಮಿತಿಯಿಂದ ಕಾರ್ಮಿಕರಾದ ರಿಯಾಜ ಉಕ್ಕಲಿ, ಶೇಖರ ತೊರವಿ ಮತ್ತು ಮೊಹಸೀನ್​ ಉಕ್ಕಲಿ ಅವರನ್ನು ಸನ್ಮಾನಿಸಲಾಯಿತು.

    ಕೆಪಿಸಿಸಿ ಸದಸ್ಯ ಅಬ್ದುಲ್​ ಹಮೀದ ಮುಶ್ರೀಫ, ಜಿಲ್ಲಾ ಕಾಂಗ್ರೆಸ್​ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ ಕಾಲೇಬಾಗ, ಅಫ್ಜಲ್​ ಜಾನವೇಕರ, ವಿದ್ಯಾವತಿ ಅಂಕಲಗಿ, ಜಾಕೀರ ಹುಸೇನ ಮುಲ್ಲಾ, ಇಲಿಯಾಸ ಅಹ್ಮದ ಸಿದ್ದಿಕಿ, ವಸಂತ ಹೊನಮೊಡೆ, ಶಬ್ಬೀರ ಜಾಗೀರದಾರ, ಪಯಾಜ ಕಲಾದಗಿ, ತಾಜುದ್ದೀನ ಖಲೀಫಾ, ಶರಣಪ್ಪ ಯಕ್ಕುಂಡಿ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಎಂ.ಎ. ಬಕ್ಷಿ, ಲಾಲಸಾಬ ಕೊರಬು, ಸತೀಶ ಅಡವಿ, ಅಕ್ಬರ ನಾಯಕ, ಅಯುಬಖಾನ ನದಾಫ್​, ದೇವಾನಂದ ಲಚ್ಯಾಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts