

Recipe: ಇಂದಿನ ದಿನಗಳಲ್ಲಿ ಅನೇಕರು ಸಂಜೆ ವಿಧವಿಧವಾದ ತಿಂಡಿ ತಿನ್ನಲು ಬಯಸುತ್ತಾರೆ. ಆಹಾರ ಪ್ರಿಯರಿಗೆ ಸಂಜೆ ಏನಾದರೂ ತಿನ್ನಲೇ ಬೇಕು ಎಂದಾಗ ಅವರು ಆದಷ್ಟು ರಸ್ತೆ ಬದಿಯಲ್ಲಿರುವ ಅಥವಾ ಚಾಟ್ಸ್ ಅಂಗಡಿಗಳಿಗೆ ಹೋಗಿ ತಮಗಿಷ್ಟವಾದ ಆಹಾರವನ್ನು ಸೇವಿಸುತ್ತಾರೆ. ಅಂತವರು ನಿಮ್ಮ ಮನೆಯಲ್ಲಿಯೇ ಸ್ವಲ್ಪ ಸಮಯದಲ್ಲಿ ಈ ರೀತಿಯ ವೆಜ್ ಚಾಪ್ಸ್ ಮಾಡಿ ಸೇವಿಸಿ...
* 3 ಆಲೂಗಡ್ಡೆ
* 4 ಬ್ರೆಡ್ ತುಂಡುಗಳು
* 1 ಕ್ಯಾರೆಟ್
* 1 ಈರುಳ್ಳಿ
* 1 ಕ್ಯಾಪ್ಸಿಕಂ
* 1 ಚಮಚ ಖಾರದಪುಡಿ
* 1/4 ಚಮಚ ಗರಂ ಮಸಾಲ
* 2 ಮೆಣಸಿನಕಾಯಿ
* ರುಚಿಗೆ ತಕ್ಕಷ್ಟು ಉಪ್ಪು
* 1 ಚಮಚ ಸೇಜ್ವಾನ ಮಸಾಲ
* ಕರಿಯಲು ಎಣ್ಣೆ
ಮೊದಲು ಒಂದು ಕುಕ್ಕರ್ನಲ್ಲಿ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದುಕೊಳ್ಳಿ. ನಂತರ, ಒಂದು ಬೌಲ್ಗೆ ಬ್ರೆಡ್ ತುಂಡುಗಳನ್ನು ಪುಡಿಮಾಡಿ ಹಾಕಿ ಅದಕ್ಕೆ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್, ಖಾರದಪುಡಿ, ಗರಂ ಮಸಾಲ, ಹಸಿರು ಮೆಣಸಿನಕಾಯಿ, ಉಪ್ಪು, ಸೇಜ್ವಾನ ಮಸಾಲ ಹಾಗೂ ಸ್ಮಾಷ್ ಮಾಡಿದ ಆಲುಗಡ್ಡೆಯನ್ನು ಹಾಕಿ ಚೆನ್ನಾಗಿ ಕಲಸಿರಿ. ಇದಾದ ಬಳಿಕ ಈ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ನಿಮಗೆ ಬೇಕಾದ ಆಕಾರವನ್ನು ಕೊಡಿ.
ನಂತರ ಅಕ್ಕಿ ಹಿಟ್ಟಿಗೆ ನೀರು ಹಾಕಿ ಮಿಶ್ರಣ ತಯಾರಿಸಿ ಅದಕ್ಕೆ ಮೇಲೆ ಮಾಡಿದ ಚಾಪ್ಸ್ನ್ನು ಎದ್ದಿ ನಂತರ ಬ್ರೆಡ್ ತುಂಡುಗಳ ಮೇಲೆ ಹೊರಲಾಡಿಸಿ. ನಂತರ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ ಈಗ ಸಾಸ್ನೊಂದಿಗೆ ಸೇವಿಸಿ... (ಏಜೆನ್ಸೀಸ್)