15 ವರ್ಷದ ದಾಂಪತ್ಯಕ್ಕೆ ತೆರೆ ಎಳೆದ ನಟಿ ಸಿಂಪಲ್​ ಕೌಲ್​ ! | Divorce

Untitled design - 2025-09-03T132948.296
Published on

Divorce : ಐಸಾ ದೇಸ್ ಹೈ ಮೇರಾ ಮತ್ತು ಶರಾವತ್​ನಂತಹ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ ನಟಿ ಸಿಂಪಲ್​ ಕೌಲ್​ ತಮ್ಮ 15 ವರ್ಷಗಳ ದಾಂಪತ್ಯ ಜೀವನದಿಂದ ಬೇರ್ಪಡುವುದಾಗಿ ತಿಳಿಸಿದ್ದಾರೆ.

ಸುದ್ಧಿಮೂಲಗಳಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿದ ಇವರು, ಬೇರೆಯಾಗುವುದು ಇಬ್ಬರ ಪರಸ್ಪರ ತೀರ್ಮಾನ ಎಂದು ತಿಳಿಸಿದ್ದಾರೆ. ಇನ್ನು ನಾವಿಬ್ಬರೂ ಪ್ರಬುದ್ಧತೆ ಪಡೆದಿರುವಂತರು ಹಾಗಾಗಿ ಇಬ್ಬರೂ ತೀರ್ಮಾನಿಸಿ ನಿರ್ಧಾರ ಕೈಗೊಂಡಿದ್ದೇವೆ. ನಾವು ಕುಟುಂಬಕ್ಕಿಂತಲೂ ಹೆಚ್ಚಿನವರು. ನನ್ನ ಜೀವನದ ಹಲವು ವರ್ಷಗಳ ಕಾಲ ಈ ವ್ಯಕ್ತಿಯ ಬಗ್ಗೆ ತಿಳಿದಿದ್ದೇನೆ ಎಂದು ಹೇಳಿದರು.

ಜನರು ಹೇಗೆ ಬೇರ್ಪಡುತ್ತಾರೆ ಎಂದು ನನಗೆ ತಿಳಿದಿಲ್ಲ. ಅದರೆ ಅದು ನನ್ನ ತಲೆಯಲ್ಲಿ ಬರುವುದಿಲ್ಲ. ನಾನು ಮುಂದೆ ಪ್ರೀತಿಯಿಂದ ಬದುಕುತ್ತೇನೆ ಹಾಗೇ ಜೀವನದಲ್ಲಿ ಬಹಳಷ್ಟು ಪ್ರೀತಿ, ಸಂತೋಷ ಮತ್ತು ಆಧ್ಯಾತ್ಮಿಕತೆಯಿಂದ ಬದುಕುತ್ತೇನೆ ಎಂದು ಸಿಂಪಲ್​ ಕೌಲ್​ ತಿಳಿಸಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಅವರಿಬ್ಬರು ದೀರ್ಘ ದೂರ ಸಂಬಂಧದಲ್ಲಿರುವುದರ ಬಗ್ಗೆ ಮಾಹಿತಿ ನೀಡಿದ್ದರು.

ಈ ವೇಳೆ ನಟಿ ಮಾತನಾಡುವುದನ್ನು ಮುಂದುವರೆಸಿದ್ದು, ಅವರು ವಿದೇಶದಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ. ಕೆಲವೊಮ್ಮೆ ನಾನು ಅವರನ್ನು ಮಿಸ್​ ಮಾಡಿಕೊಳ್ಳುತ್ತೇನೆ. ನಮ್ಮಿಬ್ಬರ ನಡುವೆ ಇರುವ ಬಾಂಧವ್ಯ ತುಂಬಾ ಪ್ರಬಲವಾಗಿದೆ. ಹಾಗೇಯೇ ಉತ್ತಮ ತಿಳುವಳಿಕೆಯೂ ಸಹ ಇದೆ. ಅವರು ದೂರದಲ್ಲಿದ್ದಾಗ ವೃತ್ತಿಧರ್ಮದತ್ತ ಗಮನವರಿಸಲು ಸಾಧ್ಯವಾಗುತ್ತದೆ. ಆದರಿಂದ ನಮ್ಮಿಬ್ಬರಿಗೂ ಸಂತೋಷದ ಕೆಲಸ ಜೀವನದ ಸಮತೋಲನವಾಗಿದೆ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net