

Beauty tips : ಇಂದಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದ ವೃದ್ಯಾಪ್ಯ ವಯಸ್ಸಿನವರೆಗೂ ಎಲ್ಲರೂ ತಮ್ಮ ತ್ವಚೆಯ ಕಾಂತಿಯನ್ನು ಉಪಯುಕ್ತವಾಗಿ ಬಳಸಲು ಅನೇಕ ರೀತಿಯ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅಂದರೆ, ಪಾರ್ಲರ್ಗಳಿಗೆ ಹೋಗುವುದು, ಅನೇಕ ರೀತಿಯ ಪ್ಯಾಕ್ಗಳನ್ನು ಮುಖಕ್ಕೆ ಹಾಕಿಕೊಳ್ಳುವುದನ್ನು ಮಾಡುತ್ತಾರೆ. ಅವು ಕೆಲವೊಬ್ಬರ ಮುಖಕ್ಕೆ ಹೊಂದಿಕೊಳ್ಳಬಹುದು ಇಲ್ಲವೇ ಹೊಂದಿಕೊಳ್ಳದೇ ಇರಬಹುದು. ಆದರಿಂದ ಯಾರು ತಮ್ಮ ಮುಖದ ಕಾಂತಿಯನ್ನು ಹೆಚ್ಚು ಕಾಲ ಚೆನ್ನಾಗಿರಲು ಬಯಸುತ್ತರೋ ಅವರು ನಿಮ್ಮ ಮನೆಗಳಲ್ಲಿಯೇ ಈ ರೀತಿಯ ನೈಸರ್ಗಿಕ ಫೇಸ್ ಪ್ಯಾಕ್ ಮಾಡಿ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿಯು ಆಕರ್ಷಣೆಯಾಗಿ ಕಾಣುತ್ತದೆ.
1 ಚಮಚ ಜೇನು ತುಪ್ಪ ಹಾಗೂ 1 ಚಮಚ ನಿಂಬೆ ರಸವನ್ನು ಬೆರೆಸಿ, ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ತೊಳೆಯಿರಿ. ಇದು ಚರ್ಮವನ್ನು ಹೊಳಪುಗೊಳಿಸುತ್ತದೆ ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ.
ಒಂದು ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳನ್ನು ಬಿಟ್ಟು ನಂತರ ತಣ್ಣಿರಿನಿಮದ ತೊಳೆಯಿರಿ ಇದರಿಂದ ಕಪ್ಪು ಕಲೆಗಳು ದೂರವಾಗಿ, ಚರ್ಮವನ್ನು ತಿಳಿಯಾಗಿಸುತ್ತದೆ.
ರಾತ್ರಿ 4-5 ಬಾದಾಮಿಗಳನ್ನು ನೆನೆಯಲು ಬಿಟ್ಟು ಬೆಳಿಗ್ಗೆ ಸಿಪ್ಪೆ ಸುಲಿದು ಅದಕ್ಕೆ ಹಾಳು ಹಾಕಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ ಇದರಿಂದ ನಿಮ್ಮ ಮುಖದ ಚರ್ಮ ಮೃದುವಾಗಿ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
1 ಚಮಚ ಮೊಸರಿಗೆ ಚಿಟಿಕೆ ಅರಿಶಿಣ ಪುಡಿಯನ್ನು ಸೇರಿಸಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ ಇದು ಚರ್ಮದ ಬಣ್ಣವನ್ನು ಸಮಗೊಳಿಸುತ್ತದೆ.
ಇದನ್ನೂ ಓದಿ: ಮೆಕ್ಕೆ ಜೋಳಕ್ಕೆ ಲಗ್ಗೆ ಇಟ್ಟ ಲದ್ದಿಹುಳು
ಟೊಮಟೋ ತುಂಡುಗಳನ್ನು ತೆಗೆದುಕೊಂಡು ಅದನ್ನು ಮುಖದ ಮೇಲೆ ಉಜ್ಜಿ 10-15 ನಿಮಿಷಗಳನ್ನು ಬಿಟ್ಟು ತೊಳೆಯಿರಿ ಇದರಿಂದ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.
* ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಹಾಗೆ, ಅದರ ಜೊತೆಗೆ ಹಣ್ಣುಗಳು, ತರಕಾರಿಗಳನ್ನು ಸೇವಿಸುವುದರಿಂದ ಚರ್ಮವು ಸದೃಢವಾಗಿರುತ್ತದೆ.
(ಏಜೆನ್ಸೀಸ್)