ಕಪ್ಪು ಟೀ-ಶರ್ಟ್​, ಪಲಾಝೋ ಪ್ಯಾಂಟ್​ ಧರಿಸಿ ವಿಮಾನ ನಿಲ್ದಾಣದಿಂದ ಹೊರಬಂದ ಅಕ್ಷಯ್​ ಕುಮಾರ್​; ಉಡುಪಿನ ಬಗ್ಗೆ ಗೇಲಿ ಮಾಡಿದ ನೆಟ್ಟಿಗರು | Akshay Kumar

untitled-design-2025-08-22t170104688-68a8550ad336a
Published on

Akshay Kumar: ಶುಕ್ರವಾರ ವಿಮಾನ ನಿಲ್ದಾಣವೊಂದರಲ್ಲಿ ಅಕ್ಷಯ್​ ಕುಮಾರ್​ ನೆಟ್ಟಿಗರ ಕಣ್ಣಿಗೆ ಭಾರೀ ಹಾಸ್ಯಾಸ್ಪದವಾಗಿ ಕಾಣಿಸಿಕೊಂಡಿದ್ದಾರೆ. ಇವರು ಕಪ್ಪು ಟೀ-ಶರ್ಟ್​ ಜೊತೆಗೆ ಪಲಾಝೋ ಪ್ಯಾಂಟ್​ ಧರಿಸಿ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ನೋಡಿದ ನೆಟ್ಟಿಗರು ಅವರ ಉಡುಪಿನ ಬಗ್ಗೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.

ಅಕ್ಷಯ್​ ಕುಮಾರ್​ ತಮ್ಮ ಪತ್ನಿಯ ಟ್ವಿಂಕಲ್​ ಪ್ಯಾಂಟ್​ ಧರಿಸಿದ್ದಾರೆ ಎಂದು ಕಾಮೆಂಟ್​ ಮಾಡಿದ್ದು, ಇನ್ನು ಕೆಲವರು ಅವರನ್ನು ರಣವೀರ್​ ಸಿಂಗ್​ ಅವರೊಂದಿಗೆ ಹೋಲಿಸಿದ್ದಾರೆ.

ನೆಟಿಜನ್​ಗಳಲ್ಲಿ ಒಬ್ಬರು ಇವರ ವಿಡಿಯೋಗೆ ಕಾಮೆಂಟ್​ ಮಾಡಿದ್ದು, ಅವಸರದಲ್ಲಿ ನನ್ನ ಫೈಜಾಮ್​​ ಹಾಕಿದ್ದೀರಾ.. ಬೇಗ ಮನೆಗೆ ಬಂದು ವಾಪಸ್​ ಕೊಟ್ಟು ಹೋಗಿ ಎಂದು ಬರೆದಿದ್ದಾರೆ. ಹಾಗೇ ಇನ್ನೋರ್ವ ನೆಟಿಜನ್ ರಣವೀರ್​ ತರ ಕಾಣುತ್ತಿದ್ದೀರ ಎಂದು ಕಮೆಂಟ್​ ಮಾಡಿದ್ದಾರೆ.

ಅಕ್ಷಯ್​ ಅವರ ಸಿನಿಮಾಗಳು

ಅಕ್ಷಯ್​ ಕುಮಾರ್ ಅವರ ಜಾಲಿ ಎಲ್ ಎಲ್ ಬಿ 3, ಭೂತ್ ಬಾಂಗ್ಲಾ, ವೆಲ್ಕಮ್ ಟು ಜಂಗಲ್, ಹೇರಾ ಫೆರಿ 3, ಮತ್ತು ಹೈವಾನ್ ನಂತಹ ಹಲವು ಚಿತ್ರಗಳು ಸಾಲಿನಲ್ಲಿವೆ. ಜಾಲಿ ಎಲ್ ಎಲ್ ಬಿ 3 ಸೆಪ್ಟೆಂಬರ್ 13, 2025 ರಂದು ಬಿಡುಗಡೆಯಾಗಲಿದೆ ಮತ್ತು ಚಿತ್ರದ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆಗೊಂಡಿದೆ.

ತೊಂದರೆಯಲ್ಲಿ ಜಾಲಿ ಎಲ್‌ ಎಲ್‌ ಬಿ 3

ಎಲ್‌ಎಲ್‌ಬಿ 3 ಚಿತ್ರವು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದು, ಈ ಚಿತ್ರವನ್ನು ನಿಷೆಧಿಸುವಂತೆ ಅರ್ಜಿದಾರರು ಪುಣೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ಚಿತ್ರವು ನ್ಯಾಯಾಂಗ ವ್ಯವಸ್ಥೆ ಹಾಗೂ ವಕೀಲರನ್ನು ಅಣಿಕಿಸುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಅಕ್ಷಯ್​ ಹಾಗೂ ಅರ್ಷದ್​ ಅವರಿಗೆ ಆಗಸ್ಟ್​ 28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಲಾಗಿದೆ. ಈ ಬಗ್ಗೆ ನಟರಾಗಲಿ ಅಥವಾ ನಿರ್ಮಾಪಕರಾಗಲಿ ಯಾವುದೇ ಹೇಳಿಕೆ ನೀಡಿಲ್ಲ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net