Maharashtra Assembly Elections| 99 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್​ ಮಾಡಿದ BJP

MH Election
Published on

ನವದೆಹಲಿ: ನವೆಂಬರ್​ 20ರಂದು ಮತದಾನ ನಡಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ (Maharashtra Assembly Elections) ಸಂಬಂಧಿಸಿದಂತೆ ಬಿಜೆಪಿ (BJP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 99 ಅಭ್ಯರ್ಥಿಗಳನ್ನು ಹೆಸರನ್ನು ಘೋಷಿಸಲಾಗಿದೆ.

ಬಿಜೆಪಿ, ಶಿವಸೇನಾ (ಶಿಂಧೆ ಬಣ) ಮತ್ತು ಎನ್​ಸಿಪಿ (ಅಜಿತ್ ಪವಾರ್) ಪಕ್ಷಗಳು ಮಹಾಯುತಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿವೆ. 260 ಕ್ಷೇತ್ರಗಳ ಸೀಟು ಹಂಚಿಕೆ ಪೂರ್ಣಗೊಂಡಿದ್ದು, ಉಳಿದ 28 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿವೆ. ಇದರಲ್ಲಿ ಬಿಜೆಪಿ (142), ಶಿವಸೇನಾ (ಶಿಂಧೆ ಬಣ) (66), ಎನ್​ಸಿಪಿ (ಅಜಿತ್​ ಪವಾರ್​) (52) ಕ್ಷೇತ್ರಗಳಲ್ಲಿ ಸ್ಫರ್ಧಿಸಲಿವೆ.

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಾಗಪುರ್ ಸೌತ್ ವೆಸ್ಟ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬವಾನ್​ಕುಲೆ ಕಾಮಾಠಿ ಕ್ಷೇತ್ರದಿಂದ ಚಿವರಾದ ಗಿರೀಶ್ ಮಹಾಜನ್ ಅವರಿಗೆ ಜಾಮ್ನರ್, ಸುಧೀರ್ ಮುಂಗಾಂತಿವಾರ್ ಅವರಿಗೆ ಅವರಿಗೆ ಬಲ್ಲಾರ್​ಪುರ್, ಶ್ರೀಜಯ ಅಶೋಕ್ ಚವಾಣ್ ಅವರಿಗೆ ಭೋಕರ್, ಆಶೀಶ್ ಶೆಲಾರ್ ಅವರಿಗೆ ವಾಂದ್ರೆ ವೆಸ್ಟ್, ಮಂಗಲ್ ಪ್ರಭಾತ್ ಲೋಧಾ ಅವರಿಗೆ ಮಲಬಾರ್ ಹಿಲ್, ರಾಹುಲ್ ನರ್ವೇಕರ್ ಅವರಿಗೆ ಕೊಲಾಬ, ಛತ್ರಪತಿ ಶಿವೇಂದ್ರ ರಾಜೇ ಭೋಸಲೆ ಅವರಿಗೆ ಸತಾರಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ.

288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್​ 20ರಂದು ಮತದಾನ ನಡೆಯಲಿದ್ದು, 23 ರಂದು ಫಲಿತಾಂಶ ಪ್ರಕಟವಾಗಲಿದೆ. ಉದ್ಧವ್ ಠಾಕ್ರೆ ಬಣದ ಶಿವಸೇನಾ, ಶರದ್ ಪವಾರ್ ಬಣದ ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿವೆ. ಈ ಮೂರು ಪಕ್ಷಗಳ ನಡುವೆ ಸೀಟು ಹಂಚಿಕೆ ಕಾರ್ಯ ಇನ್ನಷ್ಟೇ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net