

ಹನೂರು: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ರಸ್ತೆಯಲ್ಲಿ ಹಾದು ಹೋಗುವಾಗ ಪ್ರಾಣಿ-ಪಕ್ಷಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ವಾಹನ ಸವಾರರಿಗೆ ಶನಿವಾರ ಬಣ್ಣಬಣ್ಣದ ಕೋಳಿಮರಿಗಳ ದರ್ಶನವಾಗಿದೆ.
ಹೂಪಿಳ್ಳೆ ಎಂದೇ ಕರೆಯುವ ಕೋಳಿಮರಿಗಳಿಗೆ ತಾವೆಲ್ಲಿದ್ದೇವೆ ಎಂಬುದರ ಅರಿವೇ ಇಲ್ಲ. ತನ್ನ ಮಾಲೀಕನ್ಯಾರು ಎಂಬುದೂ ಗೊತ್ತಿಲ್ಲ. ಪುಟ್ಟಪುಟ್ಟ- ಕಲರ್ಫುಲ್ ಮರಿಗಳು ಪಿಳಿಪಿಳಿ ಕಣ್ಣುಬಿಡುತ್ತ ಅತ್ತಿಂದಿತ್ತ ಹೋಡಾಡುತ್ತಿದ್ದವು. ಇವುಗಳ ಮಾಲೀಕ ಇಲ್ಲೇ ಎಲ್ಲೋ ಹೋಗಿರಬೇಕು ಎಂದು ಸುಮಾರು ಹೊತ್ತು ವಾಹನ ಸವಾರರು ಮತ್ತು ದಾರಿಹೋಕರು ಅಲ್ಲೇ ನಿಂತು ಕೋಳಿಮರಿಗಳ ಚಿನ್ನಾಟ ನೋಡುತ್ತ ನಿಂತಿದ್ದರೂ ಆ ಮಾಲೀಕ ಬರಲೇ ಇಲ್ಲ.
ಕೋಳಿ ಮರಿಗಳಿಗೆ ರೋಗ ಬಂದಿರುವುದಕ್ಕೆ ವ್ಯಾಪಾರಿಗಳು ಕಾಡಿನ ರಸ್ತೆಯಲ್ಲಿ ಬಿಟ್ಟು ಹೋಗಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.