ಎಂ. ಕೃಷ್ಣಪ್ಪ ಪಾದಯಾತ್ರೆ; ಬೆಂಗಳೂರು ದಕ್ಷಿಣದಲ್ಲಿ ಮತ್ತೊಮ್ಮೆ ಗೆಲುವಿನ ವಿಶ್ವಾಸ

WhatsApp Image 2023-04-27 at 10.06.52 AM
Published on

ಬೆಂಗಳೂರು ದಕ್ಷಿಣ: ಚುನಾವಣೆಗಾಗಿ ಕ್ಷೇತ್ರ ಸಂಚಾರ ನಡೆಸುತ್ತಿಲ್ಲ. ಶಾಸಕನಾಗಿ ನಿರಂತರವಾಗಿ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ, ಮುಖಂಡರು ಹಾಗೂ ಕಾರ್ಯಕರ್ತರ ಪ್ರೀತಿ, ವಿಶ್ವಾಸ ಸ್ವೀಕರಿಸಲು ಕ್ಷೇತ್ರ ವ್ಯಾಪ್ತಿ ಸಂಚರಿಸುತ್ತಿದ್ದೇನೆ ಎಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ತಿಳಿಸಿದ್ದಾರೆ.

ಆರ್.ಬಿ.ಐ. ಲೇಔಟ್‌ನಲ್ಲಿ ಆಯೋಜಿಸಿದ್ದ ಪಕ್ಷ ಸಂಘಟನೆ ಹಾಗೂ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಿಂಗಸಂದ್ರ ವಾರ್ಡ್‌ನ ಹಲವೆಡೆ ಪಾದಯಾತ್ರೆಯ ಮೂಲಕ ಮತಯಾಚನೆ ನಡೆಸಿದರು. ಕೊಪ್ಪದಲ್ಲಿ ಮತಯಾಚನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ, ಗೊಟ್ಟಿಗೆರೆ ವಾರ್ಡ್‌ನ ಮುಖಂಡರು ಹಾಗೂ ಕಾರ್ಯಕರ್ತರು ಜನ ಸಭೆ ನಡೆಸಲಾಗಿದೆ ಎಂದರು. ಮತಯಾಚನೆ ವೇಳೆಯಲ್ಲಿ ಜನರು ಅತ್ಯಂತ ಪ್ರೀತಿ, ವಿಶ್ವಾಸದಿಂದ ಬರಮಾಡಿಕೊಂಡು ಅಭೂತಪೂರ್ವ ಸ್ವಾಗತ ನೀಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನಮ್ಮ ಕ್ಷೇತ್ರದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರಿಗೂ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ತಿಳಿದಿದೆ. ದೇಶದ ರಕ್ಷಣೆಗಾಗಿ, ರಾಜ್ಯದ ಅಭಿ ವೃದ್ಧಿಗಾಗಿ ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದರು.

ಬಿಜೆಪಿ ಮುಖಂಡರಾದ ಧರ್ಮೇಂದ್ರ ಪಂಚಾಲಿ, ಟಿ. ನಾರಾಯಣ್, ಗೊಟ್ಟಿಗೆರೆ ವಾರ್ಡ್ ಯುವಮುಖಂಡ ವಿನಯ್‌ ಗೌಡ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net