10 ಸಾವಿರ ರೂ. ಲಂಚ ಪಡೆಯುತ್ತಿದ್ದ ಪೇದೆಯನ್ನು ರೆಡ್​ಹ್ಯಾಂಡ್​ ಆಗಿ ಹಿಡಿದ ಲೋಕಾಯುಕ್ತ ಪೊಲೀಸರು

Police Arrest
Published on

ಕೊಡಗು: ಪಾನ್ ಬೀಡಾ ಅಂಗಡಿ ಬಳಿ ಲಂಚ ಪಡೆಯುತ್ತಿದ್ದ ಪೇದೆಯೊಬ್ಬ ಲೋಕಾಯುಕ್ತರ ಬಲೆಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ಮಡಿಕೇರಿ ಗ್ರಾಮಾಂತರ ಠಾಣಾ ಸಿಬ್ಬಂದಿ ಸೋಮಶೇಖರ್ ಸಜ್ಜನ್ ಲೋಕಾಯುಕ್ತರ ಬಲೆಗೆ ಬಿದ್ದ ಪೇದೆ.

ಪೇದೆ ಸೋಮಶೇಖರ್ ಸಜ್ಜನ್, ಬಿಳಿಗೇರಿ ನಿವಾಸಿ ಕಿರಣ್ ಎಂಬುವವರ ಬಳಿ ಮಣ್ಣು ಸಾಗಾಟ ಮಾಡಲು ಹಣದ ಬೇಡಿಕೆ ಇಟ್ಟಿದ್ದ. ಅದರಂತೆ ಪೇದೆ ಸೋಮಶೇಖರ್ 10,000 ರೂ. ಲಂಚ ಪಡೆಯುವ ವೇಳೆ ಮಡಿಕೇರಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ನಗರದ ಬೀಡಾ ಅಂಗಡಿಯ ಬಳಿ ಪೇದೆ ಸೋಮಶೇಖರ್ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net