

ಪುತ್ತೂರು (ದಕ್ಷಿಣ ಕನ್ನಡ): ಬಿಜೆಪಿ ಪಕ್ಷದ ಮುಖಂಡ ಹರಿಪ್ರಸಾದ್ ಯಾದವ್ ವಿವಾಹಿತ ಮಹಿಳೆಯ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಲ್ಲದೆ, ಕೊಲೆಗೆ ಯತ್ನಿಸಿ ಬೆದರಿಕೆ ಹಾಕಿದ ಬಗ್ಗೆ ಆಕೆಯ ಪತಿ ಕಳೆದ ಬುಧವಾರ ಪುತ್ತೂರು ಸಹಾಯಕ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
ಪೆರುವಾಯಿ ನಿವಾಸಿ ಪತಿ ತನ್ನ ಪತ್ನಿ ಜ.21ರಂದು ಒಡಿಯೂರು ಜಾತ್ರೆಗೆ ಹೋಗುವುದಾಗಿ ಹೇಳಿ, ಬಿಜೆಪಿ ಮುಖಂಡ ಹರಿಪ್ರಸಾದ್ ಯಾದವ್ ಕಾರಿನಲ್ಲಿ ಅನುಮಾಸ್ಪದ ರೀತಿಯಲ್ಲಿ ಕರೆದುಕೊಂಡು ಹೋಗುತ್ತಿರುವ ಮಾಹಿತಿ ಬಂದ ಹಿನ್ನಲೆಯಲ್ಲಿ ಕಾರನ್ನು ದ್ವಿಚಕ್ರವಾಹನದಲ್ಲಿ ಹಿಂಬಾಲಿಸಿದ್ದಾರೆ.
ಸುಳ್ಯದ ಜಾಲ್ಸೂರಿನಲ್ಲಿ ಕಾರನ್ನು ಹಿಂದಿಕ್ಕಿ ಮುಂದೆ ಹೋಗಿ ಕಾರು ನಿಲ್ಲಿಸಲು ಕೈ ಸನ್ನೆ ಮಾಡಿದಾಗ ಬಿಜೆಪಿ ಮುಖಂಡ ಹರಿಪ್ರಸಾದ್ ಯಾದವ್ ಕಾರಿನ ಚಾಲಕನ ಮೂಲಕ ಕಾರು ಹತ್ತಿಸಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಸ್ಥಳೀಯರನ್ನು ಕಾಣುತ್ತಿದ್ದಂತೆ ಹರಿಪ್ರಸಾದ್ ಯಾದವ್ ತಲೆಮರೆಸಿಕೊಂಡಿದ್ದು, ಕಾರಿನಲ್ಲಿದ್ದ ಪತ್ನಿಯನ್ನು ಪ್ರಶ್ನಿಸಿದಾಗ ರೌಡಿಗಳ ಮೂಲಕ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆಯ ಪತಿ ಪುತ್ತೂರು ಡಿವೈಎಸ್ಪಿಯವರಿಗೆ ಈ ಬಗ್ಗೆ ದೂರು ನೀಡಿ, ತನ್ನ ಪತ್ನಿಯೊಂದಿಗೆ ಕೇಪು ಗ್ರಾಮದ ಮುಳಿಯಾಳ ಮುಗೇರು ನಿವಾಸಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರು ಹಾಗೂ ಪುಣಚ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಹರಿಪ್ರಸಾದ್ ಯಾದವ್ ಮಧ್ಯೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿದಂತೆ, ದೂರುದಾರನಿಗೆ ವಿವಾಹವಾಗಿ 9 ವರ್ಷವಾಗಿದ್ದು, ದಂಪತಿಗೆ 8 ವರ್ಷದ ಹೆಣ್ಣು ಮಗಳಿದ್ದಾಳೆ. ಪತ್ನಿ ಕೆಲ ವರ್ಷಗಳಿಂದ ತನ್ನ ಜತೆಗೆ ಇರದೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ. ಆದರೇ ನಾವು ವಿವಾಹ ವಿಚೇಧನ ಪಡೆದುಕೊಂಡಿರದೇ ನಮ್ಮಿಬ್ಬರ ವಿವಾಹ ಊರ್ಜಿತದಲ್ಲಿದೆ ಎಂದು ದೂರುದಾರ ಸ್ಪಷ್ಟ ಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಷ್ಟ್ರೀಯ ಪಕ್ಷದ ಮುಖಂಡನೊಬ್ಬನ ವರ್ತನೆ ಇದೀಗ ಚರ್ಚೆಗೆ ಕಾರಣವಾಗಿದೆ.