ಲಾಕ್​ಡೌನ್​ 3 ಘೋಷಣೆಯಾದ ಬೆನ್ನಲ್ಲೇ ಟ್ವಿಟರ್​ನಲ್ಲಿ ಹರಿದುಬಂದ ಮೀಮ್ಸ್​ ನೋಡಿದ್ರೆ ನಗೋದು ಗ್ಯಾರೆಂಟಿ!

Corona
Published on

ನವದೆಹಲಿ: ರಾಷ್ಟ್ರದಲ್ಲಿ ಮೂರನೇ ಹಂತದ ಕರೊನಾ ವೈರಸ್​ ಲಾಕ್​ಡೌನ್​ ಹೇರಲಾಗಿದ್ದು, ಮತ್ತೆ ಎರಡು ವಾರಗಳ ಕಾಲ ಜನರು ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ನಾಳೆಗೆ ಲಾಕ್​ಡೌನ್​ ಕೊನೆಯಾಗುತ್ತದೆ ಎಂಬ ಖುಷಿಯಲ್ಲಿದ್ದ ಮಂದಿಗೆ ಲಾಕ್​ಡೌನ್​ ಮುಂದುವರಿಕೆ ತುಸು ಬೇಸರವೆನಿಸಿದ್ದು, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಟ್ವಿಟರ್​ ಬಳಕೆದಾರರು ತಮ್ಮದೇ ರೀತಿಯಲ್ಲಿ ಟ್ರೋಲ್​ ಮಾಡಿದ್ದಾರೆ.

ನಿನ್ನೆಯಷ್ಟೇ (ಶುಕ್ರವಾರ) ಕೇಂದ್ರ ಗೃಹ ಸಚಿವಾಲಯ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಲಾಕ್​ಡೌನ್​ ವಿಸ್ತರಣೆ ನಿರ್ಧಾರವನ್ನು ತಿಳಿಸಿತು. ಕರೊನಾ ಬಾಧಿತ ಪ್ರದೇಶಗಳನ್ನು ಕೆಂಪು, ಹಸಿರು ಮತ್ತು ಕಿತ್ತಳೆ ವಲಯ ಎಂದು ವಿಭಾಗಿಸಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿತು.

ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ಟ್ವಿಟರ್​ನಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಮೀಮ್ಸ್​ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಲಾಕ್​ಡೌನ್​ 3 (#Lockdown3) ಹ್ಯಾಶ್​ಟ್ಯಾಗ್​ ಮೂಲಕ ಸರ್ಕಾರದ ನಿರ್ಧಾರಕ್ಕೆ ಹಾಸ್ಯ ಮಿಶ್ರಣ ಮಾಡಿದ್ದಾರೆ. ಅವುಗಳ ಒಂದಿಷ್ಟು ಝಲಕ್​ ಅನ್ನು ನೀವಿಲ್ಲಿ ಕಾಣಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net