ಸಲ್ಮಾನ್​ ಖಾನ್​ಗೆ ಜೀವ ಬೆದರಿಕೆ..

Salman Khan
Published on

ಗಾಯಕ ಸಿದ್ದು ಮೂಸೆವಾಲಾರನ್ನು ಹತ್ಯೆ ಮಾಡಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಇರುವುದು ಗೊತ್ತಿದೆ. ಹೀಗಾಗಿಯೇ ಸಲ್ಮಾನ್ ಖಾನ್ ಗನ್ ಲೈಸೆನ್ಸ್, ಬುಲೆಟ್ ಪ್ರೂಫ್ ಕಾರು, ಪೊಲೀಸ್ ಭದ್ರತೆ ಜತೆಗೆ ಹೆಚ್ಚುವರಿ ಬೌನ್ಸರ್​ಗಳ ಜತೆ ಕೆಲವು ದಿನಗಳಿಂದ ಹೊರಗೆ ಬರುತ್ತಿದ್ದಾರೆ. ಅವರ ಹತ್ಯೆಗೆ ಶಾರ್ಪ್ ಶೂಟರ್​ಗಳನ್ನು ಕಳುಹಿಸಲಾಗಿತ್ತು. ಆದರೆ ಅನಾಹುತ ಸಂಭವಿಸುವ ಮುನ್ನವೇ ಆರೋಪಿಗಳನ್ನು ಬಂಧಿಸಲಾಗಿತ್ತು. ಅದರ ನಡುವೆಯೇ ಈಗ ಸಲ್ಮಾನ್ ಹತ್ಯೆಗೆ ಪ್ಲಾ್ಯನ್ ಬಿ ಕೂಡ ಸಿದ್ಧವಾಗಿದ್ದ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಹೌದು, ಮುಂಬೈನ ಪನ್ವೇಲ್​ನಲ್ಲಿ ಸಲ್ಮಾನ್ ಖಾನ್ ಫಾಮರ್್​ಹೌಸ್ ಹೊಂದಿದ್ದಾರೆ. ಆಗೊಮ್ಮೆ ಈಗೊಮ್ಮೆ ಅಲ್ಲಿಗೆ ಹೋಗಿಬರುತ್ತಿರುತ್ತಾರೆ. ಆ ಸಮಯದಲ್ಲಿ ಅವರ ಹತ್ಯೆಗೆ ಹೊಂಚು ಹಾಕಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನ ಐವರು ಶಾರ್ಪ್ ಶೂಟರ್​ಗಳು, ಸಮೀಪದಲ್ಲೇ ಮನೆ ಬಾಡಿಗೆಗೆ ಪಡೆದು ವಾಸಿಸುತ್ತಿದ್ದರಂತೆ. ಸಲ್ಮಾನ್ ಅಭಿಮಾನಿಗಳಂತೆ ಫಾಮ್ರ್ ಹೌಸ್ ಬಳಿ ತೆರಳಿ ಸೆಕ್ಯುರಿಟಿಗಳನ್ನು ಪರಿಚಯ ಮಾಡಿಕೊಂಡಿದ್ದ ಶಾರ್ಪ್ ಶೂಟರ್​ಗಳು, ಅವರ ಓಡಾಟದ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಒಂದೂವರೆ ತಿಂಗಳಲ್ಲಿ ಎರಡು ಬಾರಿ ಸಲ್ಮಾನ್ ಫಾಮರ್್​ಹೌಸ್​ಗೆ ಬಂದಿದ್ದರು ಎನ್ನಲಾಗಿದೆ.

ಬಾಂದ್ರಾದ ಮನೆಯಿಂದ ಪನ್ವೇಲ್ ತೋಟದವರೆಗೆ ಎಲ್ಲೆಲ್ಲಿ ತಿರುವುಗಳಿವೆ? ಎಷ್ಟು ರಸ್ತೆ ಗುಂಡಿಗಳಿವೆ? ಕಾರ್ ಎಲ್ಲಿ ನಿಧಾನವಾಗುತ್ತದೆ? ಎಲ್ಲಿ ಅಟ್ಯಾಕ್ ಮಾಡಬಹುದು ಅಂತೆಲ್ಲಾ ಪ್ಲಾ್ಯನ್ ಮಾಡಿದ್ದರು ಎನ್ನಲಾಗಿದೆ. ಬಂಧಿತರಿಂದ ಐದು ಪಿಸ್ತೂಲುಗಳು ಹಾಗೂ ಸಜೀವ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net