ಈ ಬಾಲಕನ ಮೂಗಲ್ಲಿ ಕೇಕ್​ ಒಳಗೆ ಹೋಗಿತ್ತು...ಅದನ್ನು ಸ್ವಚ್ಛಗೊಳಿಸುತ್ತಿದ್ದಾಗ ಹೊರಬಿತ್ತು ಅಚ್ಚರಿಯ ವಸ್ತು !

Boy
Published on

ಲೆಗೋ ಆಟ ಮಕ್ಕಳಿಗೆ ಅಚ್ಚುಮೆಚ್ಚು. ಸಣ್ಣಸಣ್ಣ ಪ್ಲಾಸ್ಟಿಕ್​ ಇಟ್ಟಿಗೆಗಳಿಂದ ಮನೆ ಕಟ್ಟುವ ಆಟವನ್ನು ಪುಟ್ಟ ಮಕ್ಕಳು ತುಂಬ ಇಷ್ಟಪಡುತ್ತಾರೆ.

ಹಾಗೇ ಇಲ್ಲೊಬ್ಬ ಬಾಲಕ ಆಟವಾಡುತ್ತ ಒಂದು ಸಣ್ಣ ಲೆಗೋದ ಒಂದು ಸಣ್ಣ ಪ್ಲಾಸ್ಟಿಕ್​ ತುಂಡನ್ನು ಮೂಗಿಗೆ ಹಾಕಿಕೊಂಡಿದ್ದ. ಆದರೆ ಅದನ್ನು ತೆಗೆಯಲು ಸಾಧ್ಯವಾಗದೆ, ಎರಡು ವರ್ಷಗಳ ನಂತರ ಅದೇ ಹೊರಬಿದ್ದ ವಿಚಿತ್ರ ಘಟನೆ ನಡೆದಿದೆ.

ದಕ್ಷಿಣ ನ್ಯೂಜಿಲೆಂಡ್​​ನ ಡುನೆಡಿನ್​ ನಿವಾಸಿ ಸಮೀರ್​ ಅನ್ವರ್​ ಏಳು ವರ್ಷದ ಬಾಲಕ. ಇವನು 2018ರಲ್ಲಿ ಲೆಗೋ ಆಟವಾಡುತ್ತಿದ್ದಾಗ ಅದರ ಒಂದು ಸಣ್ಣ ತುಂಡನ್ನು ಮೂಗಿಗೆ ಹಾಕಿಕೊಂಡಿದ್ದ. ಅದನ್ನು ತಿಳಿದ ಸಮೀರ್​ ತಂದೆ-ತಾಯಿ ಕೂಡ ಆತಂಕಗೊಂಡು, ಅವನ ಮೂಗಿನಲ್ಲಿ ನೋಡಿದರು..ಅದು ಕಂಡಿರಲಿಲ್ಲ.

ನಂತರ ತಮ್ಮ ಮಗನನ್ನು ವೈದ್ಯರ ಬಳಿಯೂ ಕರೆದುಕೊಂಡು ಹೋದರು. ಆದರೆ ಅವರಿಗೂ ಲೆಗೋ ತುಂಡು ಕಾಣಿಸಲಿಲ್ಲ.

ಲೆಗೋದ ತುಣುಕನ್ನು ಕಂಡುಹಿಡಿಯಲು ವಿಫಲರಾದ ವೈದ್ಯರು, ಆ ತುಂಡು ಮಗುವಿನ ಜೀರ್ಣಾಂಗವ್ಯೂಹದ ಮೂಲಕ ಮುಂದೆ ಚಲಿಸಬಹುದು ಎಂದು ಪಾಲಕರಿಗೆ ತಿಳಿಸಿದ್ದರು.

ಅಷ್ಟಾದ ಮೇಲೆ ಒಂದಿನವೂ ಅನ್ವರ್​​ನಿಗೆ ಎಲ್ಲಿಯೂ ನೋವು ಬರಲಿಲ್ಲ. ಉಸಿರಾಟದ ತೊಂದರೆಯೂ ಆಗಲಿಲ್ಲ. ಆರಾಮಾಗೇ ಇದ್ದ. ಹಾಗಾಗಿ ಪಾಲಕರೂ ಅದರ ಬಗ್ಗೆ ಮರೆತೇಬಿಟ್ಟಿದ್ದರು. ಇದನ್ನೂ ಓದಿ: ಈ ಶಾಸಕಿ ಭಾರತದ ನಕ್ಷೆ ಕಾಪಿ-ಪೇಸ್ಟ್‌ ಮಾಡುವಾಗ ಕಾಶ್ಮೀರ ಬಿಟ್ಟುಹೋಯಿತಂತೆ!

ತುಂಬ ಚೇಷ್ಟೆ, ತುಂಟಾಟ ಮಾಡುತ್ತಿದ್ದ ಅನ್ವರ್​ ನಿನ್ನೆ ರಾತ್ರಿ ಒಂದು ಪ್ಲೇಟ್​​ನಲ್ಲಿ ಇಟ್ಟಿದ್ದ ಕಪ್​ ಕೇಕ್​​ನ್ನು ನೆಲದ ಮೇಲೆ ಬಾಗಿ, ಹಾಗೇ ಬಾಯಿಯಿಂದ ಎತ್ತಿಕೊಳ್ಳಲು ನೋಡಿದೆ. ಆದರೆ ಹಾಗೆ ಮಾಡುವಾಗ ಕೇಕ್​​ನ ಒಂದು ದೊಡ್ಡ ತುಂಡು ಬಾಯಿಗೆ ಬಂತು. ಅವನು ಬಾಯಿಯಲ್ಲಿಯೇ ಎತ್ತಿಕೊಳ್ಳಲು ಮುಂದಾಗಿದ್ದರಿಂದ ಕೇಕ್​ ಮೂಗಿಗೂ ಹೋಯಿತು. ಮೂಗಿನೊಳಗೆಲ್ಲ ಕೇಕ್​ ಹೋಗಿ ಅವನಿಗೆ ತುಂಬ ಕಿರಿಕಿರಿ ಆಗಲು ಶುರುವಾಯಿತು. ಆಗ ಅವನ ಅಮ್ಮ ಬಂದು ಮೂಗನ್ನು ಸ್ವಚ್ಛ ಮಾಡಲು ಸಹಾಯ ಮಾಡಿದರು. ಆತನ ಮೂಗಿನ ಹೊಳ್ಳೆಗಳನ್ನೆಲ್ಲ ಸ್ವಚ್ಛಗೊಳಿಸಲಾಯಿತು. ಮೂಗಿನ ಒಳಗೆಲ್ಲ ಸೇರಿದ್ದ ಪಿಂಕ್​ ಕಪ್​ ಕೇಕ್​​ನ್ನು ತೆಗೆಯುವ ಪ್ರಯತ್ನದಲ್ಲಿದ್ದಾಗ, ಅವನ ಮೂಗಿನಿಂದ ಫಂಗಸ್​​ನಿಂದ ಮುಚ್ಚಿದ್ದ ಕಪ್ಪು ಬಣ್ಣದ ಲೆಗೋ ತುಂಡು ಕೂಡ ಹೊರಬಿತ್ತು.

ಎರಡು ವರ್ಷಗಳಿಂದ ಅದೆಲ್ಲಿತ್ತೋ ಗೊತ್ತಿಲ್ಲ. ಆದರೆ ಹುಲ್ಲಿನಂತೆ ಆಗಿತ್ತು. ನಾನು ಲೆಗೋವನ್ನು ಮೂಗಿನಲ್ಲಿ ಹಾಕಿಕೊಂಡೆ ಎಂದು ಅಂದು ಹೇಳಿದಾಗ ಯಾರಿಗೂ ಕಾಣಿಸಿರಲಿಲ್ಲ. ಅದು ಮೂಗಿನೊಳಗೆ ಹೋಗಿಲ್ಲ ಎಂದು ಅಪ್ಪ-ಅಮ್ಮ ಹೇಳಿದ್ದರು. ಇದೀಗ ತನ್ನಿಂದ ತಾನೇ ಹೊರಬಿತ್ತು ಎಂದು ಅನ್ವರ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net