More

    ಈ ಶಾಸಕಿ ಭಾರತದ ನಕ್ಷೆ ಕಾಪಿ-ಪೇಸ್ಟ್‌ ಮಾಡುವಾಗ ಕಾಶ್ಮೀರ ಬಿಟ್ಟುಹೋಯಿತಂತೆ!

    ತಿರುವನಂತಪುರ: ಮೊನ್ನೆ ಆಗಸ್ಟ್‌ 15ರಂದು ಭಾರತೀಯರಿಗೆ ಸ್ವಾತಂತ್ರ್ಯದ ಸಂಭ್ರಮ. ಅಂದು ಭಾರತದ ನಕ್ಷೆ. ಬಾವುಟ ಹಾಕಿಕೊಂಡು ಭಾರತೀಯರು ದೇಶಪ್ರೇಮ ಮೆರೆಯುತ್ತಿದ್ದರೆ, ಅತ್ತ ಕೇರಳದ ಶಾಸಕಿಯೊಬ್ಬರು ಎಡವಟ್ಟು ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರತದ ಜನರಿಗೆ ಶುಭವನ್ನೇನೋ ಕೋರಿದರು. ಆದರೆ ಅದರಲ್ಲಿ ಕಾಶ್ಮೀರ ಇಲ್ಲದ ಭಾರತದ ಭೂಪಟದ ಚಿತ್ರ ಹಂಚಿಕೊಂಡರು. ಇವರ ಹೆಸರು ಶನಿಮೋಲ್ ಉಸ್ಮಾನ್. ಅರೂರ್ ಯುಡಿಎಫ್ ಶಾಸಕಿ ಇವರು.

    ಇದು ದೇಶದ್ರೋಹಿ ಕೆಲಸವಾಗಿದೆ ಎಂದು ಅನೇಕ ಕಮೆಂಟಿಗರು ಆಕ್ರೋಶ ವ್ಯಕ್ತಪಡಿಸಿ ಶಾಸಕಿ ವಿರುದ್ಧ ಪೊಲೀಸರಿಗೆ ದೂರು ನೀಡಿದರು. ಅಳಪ್ಪುಳ ಠಾಣೆಯಲ್ಲಿ ಇವರ ವಿರುದ್ಧ ಅನೇಕ ದೂರುಗಳು ದಾಖಲಾಗಿವೆ.

    ಅರೂರ್​ನ ಸಿಪಿಐ (ಎಂ) ಘಟಕದ ಸದಸ್ಯರು ಸೇರಿದಂತೆ ಹಲವರು ಶಾಸಕಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಸಾಂವಿಧಾನಿಕವಾಗಿ ಸ್ವೀಕರಿಸಿರುವ ಪ್ರಮಾಣವನ್ನು ಉಲ್ಲಂಘಿಸಿ ಕಾಶ್ಮೀರ ಭಾಗವಿಲ್ಲದ ಭಾರತದ ನಕ್ಷೆಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಉಸ್ಮಾನ್ ಅವರು ಅಪರಾಧ ಎಸಗಿದ್ದಾರೆ ಎಂದು ಸಿಪಿಐ (ಎಂ) ತನ್ನ ದೂರಿನಲ್ಲಿ ಹೇಳಿದೆ.

    ಇದನ್ನೂ ಓದಿ: ಡಿಜೆಹಳ್ಳಿ ವಿವಾದ: ಕಂ‌ಪ್ಲೇಂಟ್‌ನಲ್ಲಿ ಯೂ ಟರ್ನ್-‌ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಪಾಷಾ ದೂರು!

    ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠ ಪಿಎಸ್ ಸಾಬು, ಶಾಸಕಿ ವಿರುದ್ಧ ದೂರು ಸ್ವೀಕರಿಸಿದ್ದು, ಪ್ರಕರಣದ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

    ತಮ್ಮ ವಿರುದ್ಧ ಪೊಲೀಸ್ ಠಾಣೆಯವರೆಗೆ ಕಂಪ್ಲೇಂಟ್‌ ಹೋಗುತ್ತದೆ ಎಂಬ ಬಗ್ಗೆ ಅಂದುಕೊಳ್ಳದಿದ್ದ ಶಾಸಕಿ, ಏಕಾಏಕಿ ದಂಗಾಗಿ ಹೋಗಿದ್ದಾರೆ. ಅಲ್ಲಿಗೇ ಸುಮ್ಮನಾಗಲಿಲ್ಲ. ಇದರಲ್ಲಿ ತಮ್ಮ ತಪ್ಪೇನೂ ಇಲ್ಲ, ಉದ್ದೇಶಪೂರ್ವಕವಾಗಿ ಈ ತಪ್ಪು ಮಾಡಿಲ್ಲ ಎಂಬುದಕ್ಕೆ ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ.

    ಕೊಟ್ಟಿರುವ ಸಮಜಾಯಿಷಿ ಹೀಗೆದೆ ನೋಡಿ:  ‘ನನ್ನ ಫೇಸ್‌ಬುಕ್‌ನಲ್ಲಿ ಇಂಥ ಪ್ರಮಾದ ಆಗಿರುವುದಕ್ಕೆ ವಿಷಾದಿಸುತ್ತೇನೆ. ಈ ಬಗ್ಗೆ ನನ್ನ ಗಮನಕ್ಕೆ ಬಂದ ಕೂಡಲೇ ನಕ್ಷೆ ತೆಗೆದುಹಾಕಿದ್ದೇನೆ. ಇದು ಉದ್ದೇಶಪೂರ್ವಕವಾಗಿ ಮಾಡಿದ ಪ್ರಮಾದವಲ್ಲ. ವಿಕಿಪೀಡಿಯಾದಲ್ಲಿದ್ದ ನಕ್ಷೆಯನ್ನು ಕಾಪಿ ಮಾಡಿ ಪೇಸ್ಟ್‌ ಮಾಡುವಾಗ ಕಾಶ್ಮೀರದ ಭಾಗ ಮಾಯವಾಗಿದೆ. ಬಣ್ಣಗಳಲ್ಲಿ ಇದ್ದದ್ದಷ್ಟೇ ಸೆಲೆಕ್ಟ್‌ ಾಗಿದೆ. ಇದರ ಅರಿವಾಗದೆ ಪೋಸ್ಟ್ ಮಾಡಲಾಗಿತ್ತು. ಇದು ಉದ್ದೇಶಪೂರ್ವಕವಾಗಿ ಎಸಗಿದ ತಪ್ಪಲ್ಲ ಎಂದು ಹೇಳಿದ್ದಾರೆ.

    ಕಾಶ್ಮೀರದ ಭಾಗ ಮಾತ್ರ ಬಿಟ್ಟು ಬೇರೆಲ್ಲಾ ಹೇಗೆ ಸರಿಬಂತು ಎಂಬುದಾಗಿ ನೆಟ್ಟಿಗರು ತೀಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬಗ್ಗೆ ವಿಚಾರಣೆ ನಡೆಯುತ್ತಿದೆ.

    ಭಾರತಕ್ಕೆ ಅಕ್ರಮವಾಗಿ ಬಂದು ದಲೈಲಾಮಾ ಮೇಲೆ ಕಣ್ಣಿಟ್ಟಿದ್ದ ಚೀನಿ ‘ಕಳ್ಳ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts