More

    ಕುಸಿದ ತಾಪಮಾನ!: ‘ಊಟಿ’ ಚಳಿಗೆ ಗಢಗಢ ನಡುಗುತ್ತಿರುವ ಜನ

    ಊಟಿ: ಈ ಹೆಸರು ಕೇಳದವರೇ ಇರಲಿಕ್ಕಿಲ್ಲ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಒಂದು ನಗರವೇ ಊಟಿ ಅಥವಾ ಉದಕಮಂಡಲಂ. ಪ್ರಸಿದ್ಧ ಗಿರಿಧಾಮವಿದು. ದಕ್ಷಿಣ ಭಾರತದ ಪ್ರಮುಖ ಹನಿಮೂನ್ ಸ್ಪಾಟ್‌ಗಳಲ್ಲೂ ಊಟಿಯ ಹೆಸರಿದೆ.

    ಇದನ್ನೂ ಓದಿ:ಒಂಬತ್ತನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್, ಉಪ ಮುಖ್ಯಮಂತ್ರಿಗಳಾಗಿ ಸಾಮ್ರಾಟ್ ಮತ್ತು ವಿಜಯ್ ಪ್ರಮಾಣ ವಚನ

    ಊಟಿ ಮದ್ರಾಸ್ ಪ್ರೆಸಿಡೆನ್ಸಿಯ ಬೇಸಿಗೆಯ ರಾಜಧಾನಿ ಕೂಡಾ ಆಗಿತ್ತು. ಗಿರಿಧಾಮಗಳ ರಾಣಿ’ ಎಂದು ಕರೆಯುತ್ತಾರೆ. ಉತ್ತರ ಭಾರತದಂತೆ ಇದೀಗ ತಮಿಳುನಾಡು ನೀಲಗಿರಿ ಜಿಲ್ಲೆಯ ಊಟಿಯಲ್ಲಿ ತಾಪಮಾನ 1.3 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದ್ದು ಹಿಮ ಆವರಿಸಿಕೊಂಡಿದೆ. ಪರಿಣಾಮ ಊಟಿ ಗಿರಿಧಾಮ ಮಿನಿ ಕಾಶ್ಮೀರವಾಗಿ ಬದಲಾಗಿದೆ.

    ಕುಸಿದ ತಾಪಮಾನ!: 'ಊಟಿ' ಚಳಿಗೆ ಗಢಗಢ ನಡುಗುತ್ತಿರುವ ಜನ

    ತಾಪಮಾನ ಇಳಿಕೆಯಿಂದ ವಿಪರೀತ ಚಳಿ ಹೆಚ್ಚಾಗಿದ್ದು ಜನರು ಅಗ್ಗಿಷ್ಟಿಕೆಯ ಮೊರೆ ಹೋಗಿದ್ದಾರೆ. ಪ್ರತಿ ವರ್ಷ ಊಟಿ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಾದ ಕಾಂತಲ್​, ಪಿಂಕರ್​ ಪೋಸ್ಟ್​ ಮತ್ತು ತಲೈ ಕುಂಟಾ ಪ್ರದೇಶ ಹಿಮದಿಂದ ಆವೃತ್ತವಾಗಿತ್ತು. ಹುಲ್ಲು ಹಾಸಿನ ಮೇಲೆ ಹೆಪ್ಪುಗಟ್ಟಿದ ನೀರಿನ ಹನಿಗಳ ಹೊಸ ಲೋಕವನ್ನೇ ಸೃಷ್ಟಿಸಿದೆ.

    ಜನ ಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ. ತೀವ್ರ ಚಳಿಯಿಂದ ಮನೆಯಿಂದ ಬೆಳಗ್ಗೆ ಹೊರ ಬರಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮನ್ನು ಬೆಚ್ಚಗಾಗಲು ಬೆಂಕಿಯ ಸುತ್ತಲೂ ಕುಳಿತಿದ್ದಾರೆ.

    ಕುಸಿದ ತಾಪಮಾನ!: 'ಊಟಿ' ಚಳಿಗೆ ಗಢಗಢ ನಡುಗುತ್ತಿರುವ ಜನ

    ಕೊಯಮತ್ತೂರಿನ ವಾಯವ್ಯಕ್ಕೆ 86 ಕಿಮೀ ಮತ್ತು ಮೈಸೂರಿನ ದಕ್ಷಿಣಕ್ಕೆ 128 ಕಿಮೀ ದೂರದಲ್ಲಿ ಊಟಿ ಇದೆ. ಇದು ನೀಲಗಿರಿ ಜಿಲ್ಲೆಯ ಆಡಳಿತ ಕೇಂದ್ರ ಕೂಡಾ ಹೌದು. ನೀಲಗಿರಿ ಬೆಟ್ಟಗಳಲ್ಲಿರುವ ಜನಪ್ರಿಯ ಗಿರಿಧಾಮಗಳಲ್ಲಿ ಊಟಿ ಕೂಡಾ ಒಂದು. ಬೆಂಗಳೂರಿನಿಂದ ಊಟಿ 271 ಕಿಮೀ ದೂರದಲ್ಲಿದೆ. 5 ಗಂಟೆ 40 ನಿಮಿಷ ತಲುಪಲು ಬೇಕಾಗುತ್ತದೆ.

    ಕುಸಿದ ತಾಪಮಾನ!: 'ಊಟಿ' ಚಳಿಗೆ ಗಢಗಢ ನಡುಗುತ್ತಿರುವ ಜನ

    ಈ ಜನಾರ್ಷಣೆಯ ಊಟಿ ಪಟ್ಟಣ ಮತ್ತು ಸುತ್ತಮುತ್ತಲು ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳೂ ಇವೆ. ಬೊಟಾನಿಕಲ್ ಗಾರ್ಡನ್, ಸರೋವರಗಳು, ಅಣೆಕಟ್ಟುಗಳು, ಬೋಟಿಂಗ್, ವಸ್ತುಸಂಗ್ರಹಾಲಯ, ಐತಿಹಾಸಿಕ ಕಟ್ಟಡಗಳು, ಟೀ ಫ್ಯಾಕ್ಟರಿ ಹೀಗೆ ಮನಸ್ಸಿಗೆ ಖುಷಿ ನೀಡುವ ಮತ್ತು ಪ್ರವಾಸದ ನೆನಪನ್ನು ಬಹುಕಾಲ ಉಳಿಯುವಂತೆ ಮಾಡುವ ಸಾಕಷ್ಟು ತಾಣಗಳು ಇಲ್ಲಿವೆ.

    ಕಾಲೇಜು ಹಾಸ್ಟೆಲ್​ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts