More

    ಬಯಲು ಜಂಗೀ ಕುಸ್ತಿ; ಕವಾಸಪುರದ ಪೈಲ್ವಾನ್ ರೋಷನ್ ವಿಜಯಿ

    ರಟ್ಟಿಹಳ್ಳಿ: ಪಟ್ಟಣದ ಶ್ರೀ ವೀರಭದ್ರೇಶ್ವರ ರಥೋತ್ಸವ, ಮಾರಿಕಾಂಬಾ ಮತ್ತು ದುರ್ಗಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಎರಡು ದಿವಸಗಳ ಕಾಲ ಏರ್ಪಡಿಸಿದ್ದ ಭಾರಿ ಬಯಲು ಜಂಗೀ ಕುಸ್ತಿ ಪಂದ್ಯಾವಳಿ ವೀಕ್ಷಕರಿಗೆ ರೋಮಾಂಚನ ಮೂಡಿಸಿತು. ಅಂತಿಮ ಹಣಾಹಣಿಯಲ್ಲಿ ಕಲಬುರಗಿಯ ಪೈಲ್ವಾನ್ ಶರಣಪ್ಪನನ್ನು ಸೋಲಿಸಿದ ಶಿಕಾರಿಪುರ ತಾಲೂಕು ಕವಾಸಪುರದ ಪೈಲ್ವಾನ್ ರೋಷನ್ ವಿಜಯದ ಮಾಲೆ ಧರಿಸಿದರು.

    ಕುಸ್ತಿ ಪಂದ್ಯಾವಳಿಗೆ ಕಲಬುರಗಿ, ಧಾರವಾಡ, ದಾವಣಗೆರೆ, ಕರೂರು, ರಾಣೆಬೆನ್ನೂರ, ಶಿಕಾರಿಪುರ, ಕಪ್ಪನಹಳ್ಳಿ, ಕವಾಸಪುರ, ಶಿಗ್ಗಾಂವಿ, ಬಂಕಾಪುರ, ಭದ್ರಾವತಿ, ಮಾಸೂರು ಸೇರಿದಂತೆ ಇತರೆಡೆಯಿಂದ 200ಕ್ಕೂ ಹೆಚ್ಚು ಪೈಲ್ವಾನರು ಆಗಮಿಸಿದ್ದರು. ಪಟ್ಟಣದ ಸರ್ಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಮೈದಾನದಲ್ಲಿ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿ ವೀಕ್ಷಣೆ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಕುಸ್ತಿ ಪ್ರೇಮಿಗಳು ಜಮಾಯಿಸಿದ್ದರು.

    ಶುಕ್ರವಾರ ಸಂಜೆ ಏರ್ಪಡಿಸಿದ್ದ ಅಂತಿಮ ಹಣಾಹಣಿಯಲ್ಲಿ ಕವಾಸಪುರ ಪೈಲ್ವಾನ್ ರೋಷನ್ ವಿಜಯಶಾಲಿಯಾದರು. ಕಮಿಟಿಯಿಂದ 20 ಸಾವಿರ ನಗದು ಮತ್ತು ಟ್ರೋಫಿ ವಿತರಿಸಲಾಯಿತು.

    ಕುಸ್ತಿ ಕಮಿಟಿ ಅಧ್ಯಕ್ಷ ಮಾಲತೇಶ ಬೆಳಕೇರಿ ಮಾತನಾಡಿ, ಯುವಕರು ಗ್ರಾಮೀಣ ಸೊಗಡಿನ ಕುಸ್ತಿ ಪಂದ್ಯಾವಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನುಷ್ಯನ ದೇಹದ ಸದೃಢತೆಗೆ ಮತ್ತು ಆರೋಗ್ಯಕ್ಕೆ ಕುಸ್ತಿ ಕ್ರೀಡೆ ನೆರವಾಗುತ್ತದೆ ಎಂದರು.

    ತೀರ್ಪಗಾರರಾಗಿ ಹನುಮಂತಪ್ಪ ಗೋಣೆಪ್ಪನವರ, ಶಂಕ್ರಪ್ಪ ತಳವಾರ, ಮಾಲತೇಶ ಬೆಳಕೇರಿ, ಬಸಣ್ಣ ಬಾಗೋಡಿ, ಮನೋಜ ಗೋಣೆಪ್ಪನವರ, ರವೀಂದ್ರ ಮುದಿಯಪ್ಪನವರ, ಚಂದ್ರಶೇಖರ ಜಾಡರ ಇತರರು ಕಾರ್ಯನಿರ್ವಹಿಸಿದರು.

    1 ಕೆ.ಜಿ. ಬೆಳ್ಳಿ ಗದೆ ದೇಣಿಗೆ:

    ಹೊಸದುರ್ಗ ಸಾಯಿ ಡೆವೆಲಪರ್ಸ್ ಮಾಲೀಕ ಕೆ.ಪಿ. ಅಶೋಕ ಅವರು 1 ಕೆ.ಜಿ. ಬೆಳ್ಳಿ ಗದೆಯನ್ನು ಜಾತ್ರಾ ಕಮಿಟಿಗೆ ದೇಣಿಗೆಯಾಗಿ ನೀಡಿದರು.

    ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ಜಾತ್ರಾ ಕಮಿಟಿ ಅಧ್ಯಕ್ಷ ಶ್ರೀನಿವಾಸ ಭೈರಪ್ಪನವರ, ರಾಜುಗೌಡ ಪಾಟೀಲ, ನವೀನ ಪಾಟೀಲ, ಸಿದ್ದಪ್ಪ ಜಾಧವ, ಪ್ರವೀಣ ಜಿಮ್ಮೇದಾರ, ಬಸವರಾಜ ಆಡಿನವರ, ನಾಗರಾಜ ಸಾಳುಂಕೆ, ಗಿರೀಶ ಬಣಕಾರ, ಪ್ರಶಾಂತ ದ್ಯಾವಕ್ಕಳವರ, ರಾಮಣ್ಣ ವಾಲ್ಮೀಕಿ, ಮಾರುತಿ ವಾಲ್ಮೀಕಿ, ರವಿ ಹದಡೇರ, ನರಸಿಂಹಪ್ಪ ಬೇವಿನಕಟ್ಟಿ, ಮಾರುತಿ ಸುಣಗಾರ, ಸಿದ್ದು ಸಾವಕ್ಕನವರ, ಕಮೀಟಿ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts