More

    ದೇಶಿ ಕ್ರೀಡೆ ಉತ್ತೇಜನೆಗೆ ಸಹಕಾರ

    ಸವಣೂರ: ಗ್ರಾಮೀಣ ಪ್ರದೇಶದ ಜಾತ್ರಾ ಮಹೋತ್ಸವದಲ್ಲಿ ದೇಶಿ ಕ್ರೀಡೆಗಳಿಗೆ ಮಹತ್ವ ದೊರೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

    ತಾಲೂಕಿನ ಹುರಳಿಕುಪ್ಪಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಯಲು ಜಂಗಿ ಕುಸ್ತಿ ಪಂದ್ಯಾವಳಿ ಕುಸ್ತಿಗೆ ಚಾಲನೆ ನೀಡಿ ಮಾತನಾಡಿದರು. ದೇಶಿ ಕ್ರೀಡೆ ಉತ್ತೇಜಿಸಲು ಅವಶ್ಯವಾಗಿರುವ ಸಹಕಾರ ನೀಡಲಾಗುವುದು ಎಂದರು.

    ಕಾಂಗ್ರೆಸ್ ಸದಸ್ಯ ಯಾಸೀರಖಾನ್ ಪಠಾಣ ಪೈಲ್ವಾನರ ಕೈಜೋಡಿಸುವ ಮೂಲಕ ಕುಸ್ತಿಗೆ ಚಾಲನೆ ನೀಡಿ ಮಾತನಾಡಿದರು.

    ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂಣದ ಆಗಮಿಸಿದ್ದ 70ಕ್ಕೂ ಹೆಚ್ಚು ಜೋಡಿ ಪೈಲ್ವಾನರು ಕುಸ್ತಿ ಆಡಿದರು. ಕಡೆಯ ಕುಸ್ತಿ ದಿನದಂದು ಜಟ್ಟಿಗಳ ಸೆಣಸಾಟಕ್ಕೆ ಪ್ರೇಕ್ಷಕರ ಉತ್ಸಾಹ ಮುಗಿಲು ಮುಟ್ಟಿತು. ಕೇಕೆ, ಸಿಳ್ಳೆ ಹಾಕಿ ತಮ್ಮ ಪೈಲ್ವಾನರನ್ನು ಹುರಿದುಂಬಿಸಿದರು.

    ಕಡೆ ಕುಸ್ತಿಯಲ್ಲಿ ಬೆಳಗಾವಿಯ ಅಬ್ಬಿ ಪೈಲ್ವಾನ್ ಶಿಕಾರಿಪುರದ ಪ್ರವೀಣ ಪೈಲ್ವಾನನನ್ನು ಸೋಲಿಸಿ ಬೆಳ್ಳಿ ಕಡೆ ಹಾಗೂ ಗೌರವವನ್ನು ಪಡೆದರು. ನಂತರ, ದಾನಿಗಳನ್ನು ಸನ್ಮಾನಿಸಲಾಯಿತು.

    ಎಂ.ಕೆ. ಬಿಜ್ಜೂರ, ಬೀರಪ್ಪ ಕೊಳ್ಳವರ, ಬರಮಪ್ಪ ಕಲಾದಗಿ, ಹೊನ್ನಪ್ಪ ಕೊಳ್ಳವರ, ಸುಭಾಸ ಮಜ್ಜಿಗಿ, ಎಂ.ಜೆ. ಮುಲ್ಲಾ, ರವಿ ಕರಿಗಾರ, ಮಹಾಂತೇಶ ಪೂಜಾರ, ಏಕಪ್ಪ ಬಿಜ್ಜೂರ, ಬಸವಂತಪ್ಪ ಕಳ್ಳಿಮನಿ, ರಾಮಣ್ಣ ವಯ್ಯಾಳಿ, ಕರಿಯಪ್ಪ ಹೆಗ್ಗನ್ನವರ, ನಿಂಗಪ್ಪ ಎರೆಸಿಮಿ, ಅಶೋಕ ಎಲಿಗಾರ, ವೀರಪ್ಪ ಹೊಸಳ್ಳಿ, ನಿಂಗಪ್ಪ ದೊಡ್ಡಮನಿ, ಶಂಕ್ರಪ್ಪ ಕಲಕೋಟಿ, ಶಶಿಕಾಂತ ಕುಲಕರ್ಣಿ, ಗಣೇಶ ಕುಲಕರ್ಣಿ, ಆನಂದ ಬಡಿಗೇರ, ಈರಣ್ಣ ಬಡಿಗೇರ, ಹಜರೇಸಾಬ್ ಚಿತ್ತೇಶಮುಲ್ಲಾ, ಯಾಸೀನಸಾಬ್ ದಿವಾನಸಾಬನವರ್, ಈರಪ್ಪ ಬಂಡಿವಡ್ಡರ, ನೀಲಕಂಠಪ್ಪ ಮ್ಯಾಗೇರಿ, ಮಲ್ಲೇಶ ಹರಿಜನ, ಫಕೀರಪ್ಪ ಭಜಂತ್ರಿ, ಫಕಿರೇಶ ಪೂಜಾರ, ಬಸವರಾಜ ಮುಸರಿ, ರಾಮಣ್ಣ ಅಜ್ಜಣ್ಣವರ, ಪಾಂಡು ತಿಪ್ಪಕ್ಕನವರ, ಪ್ರಕಾಶ ರ್ಬಾ, ಬಸವರಾಜ ದೇವಗಿರಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts