More

    ಕಾರ್ಖಾನೆ, ಕ್ಷೇತ್ರದ ಅಭಿವೃದ್ಧಿಗೆ ಬದ್ಧ

    ಭದ್ರಾವತಿ: ಕ್ಷೇತ್ರದ ಜನತೆ ಹೆಚ್ಚು ಮತಗಳನ್ನು ನೀಡುವ ಮೂಲಕ ಹೆಚ್ಚು ಅಂತರದಿಂದ ನನ್ನನ್ನು ಗೆಲ್ಲಿಸಿ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಮೂಲಕ ಇದೇ ಕನಕ ಮಂಟಪ ಮೈದಾನಕ್ಕೆ ಕರೆತರುವ ಕೆಲಸ ನಾನು ಮಾಡುತ್ತೇನೆ ಎಂದು ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

    ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಭಾನುವಾರ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿ 3ನೇ ಬಾರಿಗೆ ದೇಶದ ಪ್ರಧಾನಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ . ಜೆಡಿಎಸ್ ನಾಯಕರ ಸಹಕಾರ ಪಡೆದು ಕಾರ್ಖಾನೆಗಳೂ ಸೇರಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುತ್ತೇನೆ ಎಂದರು.
    ಏ.18ರಂದು ನಾಮಪತ್ರ ಸಲ್ಲಿಕೆಗೂ ಮುನ್ನ ಶಿವಮೊಗ್ಗದಲ್ಲಿ ಬೃಹತ್ ಮೆರವಣಿಗೆ ಮಾಡಲಾಗುವುದು. ತಾಲೂಕಿನ ಎಲ್ಲ ಜೆಡಿಎಸ್ ಹಾಗೂ ಬಿಜೆಪಿಯ ಎಲ್ಲ ಕಾರ್ಯಕರ್ತರು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ವಿಪಕ್ಷದವರಿಗೆ ಸೋಲಿನ ಭೀತಿ ಎದುರಾಗುತ್ತದೆ. ಚುನಾವಣೆ ಫಲಿತಾಂಶ ಅಂದಿನ ದಿನವೇ ತಿಳಿಸುವ ಪ್ರಯತ್ನವನ್ನು ಮಾಡೋಣ ಎಂದು ಹೇಳಿದರು.
    ಬಿಜೆಪಿ ಕಾರ್ಯಕರ್ತರನ್ನು ಚೇಲಾಗಳು ಎಂದು ಕೀಳಾಗಿ ಕರೆದಿರುವ ಶಿಕ್ಷಣ ಸಚಿವರು ಹಿಂದಿನದ್ದೆಲ್ಲಾ ಮರೆತಿದ್ದಾರೆ. ಬಿಜೆಪಿಯವರು ನೀಡುತ್ತಿರುವ ಭಾರತ್ ಅಕ್ಕಿಯನ್ನು ಯಾವುದೋ ಸೊಸೈಟಿಯ ಅಕ್ಕಿ ಕೊಡುತ್ತಿದ್ದಾರೆ. ಅದನ್ನು ತನಿಖೆ ಮಾಡುತ್ತೇನೆ ಎಂದು ಸಣ್ಣತನದ ಮಾತನಾಡುವ ಮೂಲಕ ಚುನಾವಣಾ ಆಯೋಗಕ್ಕೆ ತಿಳಿಸಿ ಅಕ್ಕಿ ಕೊಡುವುದನ್ನು ತಡೆ ಹಿಡಿದಿದ್ದಾರೆ. ಚುನಾವಣೆ ನಂತರ ಎಲ್ಲರಿಗೂ ಕಡಿಮೆ ದರದಲ್ಲಿ ಅಕ್ಕಿ ಕೊಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
    ಅಪ್ಪ-ಮಕ್ಕಳು ಅನ್ಯಾಯ ಮಾಡಿದ್ದಾರೆ ಎಂದು ಹಿಂದುತ್ವದ ಬಗ್ಗೆ ಮಾತನಾಡುವ ಮತ್ತೋರ್ವ ಮಹಾನುಭಾವ ಹೇಳುತ್ತಿದ್ದಾರೆ. ಅವರಿಂದ ಹಿಂದುತ್ವದ ಬಗ್ಗೆ ನಾವು ಕಲಿಯಬೇಕಿಲ್ಲ. ಇಂದಿನ ಚುನಾವಣೆಯಲ್ಲಿ ಮತದಾರರು ನಿಮಗೆ ಉತ್ತರ ಕೊಡಲಿದ್ದಾರೆ ಎಂದರು.
    ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ರಕ್ತವನ್ನು ಬಸಿದು ದೇಶ ಕಟ್ಟಿದ ಬಿಜೆಪಿ ಕಾರ್ಯಕರ್ತರು ಇಂದು ಎದೆ ತಟ್ಟಿಕೊಂಡು ಮತದಾರನ ಮನೆ ಬಾಗಿಲಿಗೆ ತೆರಳಿ ಮತ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ 109 ಯೋಜನೆಗಳನ್ನು ಪ್ರತಿ ಮತದಾರನ ಮನೆಗೂ ತೆರಳಿ ತಿಳಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.
    ಬಿಜೆಪಿ ಜಿಲ್ಲಾ ವಕ್ತಾರ ಜ್ಯೋತಿಪ್ರಕಾಶ್, ಬಿಜೆಪಿ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಪ್ರಮುಖರಾದ ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಜಿ.ಆನಂದಕುಮಾರ್, ಕದಿರೇಶ್, ಮಂಜುನಾಥ್ ಕದಿರೇಶ್, ಸರಸ್ವತಿ, ಸುರೇಶಪ್ಪ, ಚನ್ನೇಶ್, ಅನುಪಮಾ ಚನ್ನೇಶ್, ಜೆಡಿಎಸ್‌ನ ಕರುಣಾಮೂರ್ತಿ, ಧರ್ಮಣ್ಣ, ರವಿಕುಮಾರ್, ಗೀತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts