More

    ಆರ್‌ಸಿಬಿ ವಿರುದ್ಧ ಐಪಿಎಲ್‌ಗೆ ಭರ್ಜರಿ ಪದಾರ್ಪಣೆ ಮಾಡಿದ ಕನ್ನಡಿಗ

    ಧರ್ಮಶಾಲಾ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (92 ರನ್, 47 ಎಸೆತ, 7 ಬೌಂಡರಿ, 6 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಬಲದಿಂದ ರನ್‌ಮಳೆ ಹರಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್ -17ರ ತನ್ನ 12ನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಬೃಹತ್ ಮೊತ್ತ ಪೇರಿಸಿದೆ.

    ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಮಾಡು ಇಲ್ಲವೆ ಮಡಿ’ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ, ಕನ್ನಡಿಗ ವಿದ್ವತ್ ಕಾವೇರಪ್ಪ (36ಕ್ಕೆ 2) ನೀಡಿದ ಆರಂಭಿಕ ಆಘಾತದ ಬಳಿಕ, ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್ (55 ರನ್, 23 ಎಸೆತ, 3 ಬೌಂಡರಿ, 6 ಸಿಕ್ಸರ್) ಭರ್ಜರಿ ಜತೆಯಾಟದ ನೆರವಿನಿಂದ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 119 ರನ್‌ಗಳಿಸಿದಾಗ ಮಳೆ ಅಡ್ಡಿಪಡಿಸಿತು. ಇದರಿಂದ 25 ನಿಮಿಷ ಆಟ ನಿಲ್ಲಿಸಲಾಗಿತ್ತು. ನಂತರ ಕೊಹ್ಲಿ- ಕ್ಯಾಮರಾನ್ ಗ್ರೀನ್ (46 ರನ್, 27 ಎಸೆತ, 5 ಬೌಂಡರಿ, 1 ಸಿಕ್ಸರ್) ನಡೆಸಿದ ಜತೆಯಾಟದ ಬಲದಿಂದ ಆರ್‌ಸಿಬಿ ಅಂತಿಮವಾಗಿ 7 ವಿಕೆಟ್‌ಗೆ 241 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.

    ವಿದ್ವತ್ ಪದಾರ್ಪಣೆ: ಕಳೆದೆರಡು ವರ್ಷಗಳಿಂದ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯದ ಪರ ಉತ್ತಮ ಪ್ರದರ್ಶನ ನೀಡಿರುವ ಕರ್ನಾಟಕದ ಯುವವೇಗಿ ವಿದ್ವತ್ ಕಾವೇರಪ್ಪ ಆರ್‌ಸಿಬಿ ವಿರುದ್ಧ ಐಪಿಎಲ್‌ಗೆ ಭರ್ಜರಿ ಪದಾರ್ಪಣೆ ಮಾಡಿದರು. ಆಡಿದ ಚೊಚ್ಚಲ ಪಂದ್ಯದ ಪವರ್ ಪ್ಲೇನಲ್ಲಿ 3 ಓವರ್ ಬೌಲಿಂಗ್ ನಡೆಸಿದ 25 ವರ್ಷದ ವಿದ್ವತ್ 20 ರನ್ ನೀಡಿ 2 ವಿಕೆಟ್ ಪಡೆದರು. ಕೊಡಗಿನ ಕುವರ ವಿದ್ವತ್ ಬೌಲಿಂಗ್‌ನಲ್ಲಿಯೇ ಪಂಜಾಬ್ ಫೀಲ್ಡರ್‌ಗಳು ವಿರಾಟ್ ಕೊಹ್ಲಿ (2 ಬಾರಿ), ಪಾಟೀದಾರ್ ಕ್ಯಾಚ್ ಕೈಚೆಲ್ಲಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts