More

    ವೃದ್ಧೆಗಿಲ್ಲ ಮನೆಯಿಂದ ವೋಟಿಂಗ್ ಭಾಗ್ಯ

    ಶಹಾಬಾದ್: ಕೇಂದ್ರ ಚುನಾವಣೆ ಆಯೋಗ ದೇಶದಲ್ಲಿ ೮೫ ವರ್ಷ ಮೇಲ್ಪಟ್ಟವರು ಹಾಗೂ ಶೇ.೪೦ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಭಂಕೂರಿನಲ್ಲಿ ೯೧ ವಯಸ್ಸಿನ ಅಜ್ಜಿ ಮತದಾನದಿಂದ ದೂರವುಳಿಯುವಂತಾಗಿದೆ.

    ಭಂಕೂರಿನ ಶಾಂತನಗರ ವಾರ್ಡ್ ೫ರ ನಿವಾಸಿ ಈರಮ್ಮ ಶಂಕರರಾವ್ (೯೧) ನಡೆದಾಡುವ ಸ್ಥಿತಿಯಲ್ಲಿಲ್ಲ. ಆದರೆ ಇಲ್ಲಿವರೆಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿಲ್ಲ. ಅಜ್ಜಿ ಮನೆ ಮುಂದೆಯೇ ಅಂಗನವಾಡಿ ಕೇಂದ್ರವಿದ್ದು, ಬಿಎಲ್‌ಒ ಹಾಗೂ ಅಂಗನವಾಡಿ ಕಾರ್ಯಕರ್ತರು ಅಜ್ಜಿಯ ಮತ ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸಿದ್ದಾರೆ. ಗ್ರಾಪಂ ಸದಸ್ಯೆ ವೀಣಾ ಯಲಗೊಡಕರ ಅವರು ಜಿಲ್ಲಾ ಚುನಾವಣಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ಸೋಷಿಯಲ್ ಮಿಡಿಯಾ ಮೂಲಕ ದೂರು ನೀಡಿದ್ದಾರೆ. ದೂರಿಗೆ ಸ್ಪಂದಿಸಿದ ತರನ್ನುಮ್, ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ತಹಸೀಲ್ದಾರ್ ಮಲ್ಲಶೆಟ್ಟಿ ಚಿದರೆ ಅವರಿಗೆ ಆದೇಶಿಸಿದ್ದಾರೆ.

    ಶಹಾಬಾದ್ ತಾಲೂಕಿನಲ್ಲಿ ೮೫ ವರ್ಷ ಮೇಲ್ಪಟ್ಟವರು ೭೯೩, ಅಂಗವಿಕಲರು ೬೫೯ ಜನರಿದ್ದಾರೆ. ಇವರಲ್ಲಿ ೧೫ ಜನರು ಏ.೨೫ರಂದು ವೋಟ್ ಮಾಡಿದ್ದಾರೆ. ಭಂಕೂರಿನ ವೃದ್ಧೆ ಹೆಸರು ಪೋಸ್ಟಲ್ ವೋಟಿಂಗ್‌ನಲ್ಲಿ ಇಲ್ಲದಿರುವ ಕುರಿತು ವಿಚಾರಿಸಿ, ಮಾಹಿತಿ ಪಡೆಯಲಾಗುವುದು.

    | ಮಲ್ಲಶೆಟ್ಟಿ ಚಿದರೆ, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts