More

    ಐದು ಮತಗಟ್ಟೆಗಳು ಪಿಂಕ್ ಬೂತ್

    ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದರಂತೆ ಮಹಿಳಾ ಸಿಬ್ಬಂದಿ ನಿಯಂತ್ರಿಸುವ ಐದು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
    ಮಂಜೇಶ್ವರ ಮಂಡಲದಲ್ಲಿ 150ನೇ ಬೂತ್ ಸಂಖ್ಯೆ ಕುಂಬಳೆಯ ಹೋಲಿ ಫ್ಯಾಮಿಲಿ ಶಾಲೆ, ಕಾಸರಗೋಡು ಮಂಡಲದಲ್ಲಿ 138ನೇ ಸರ್ಕಾರಿ ಕಾಲೇಜು ಮತಗಟ್ಟೆ, ಉದುಮ ಕ್ಷೇತ್ರದಲ್ಲಿ 148ನೇ ಮತಗಟ್ಟೆ ಕುಂಡಂಕುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಹೊಸದುರ್ಗ ಕ್ಷೇತ್ರದಲ್ಲಿ 20ನೇ ಮತಗಟ್ಟೆ ವೆಳ್ಳಿಕೋತ್ ಮಹಾಕವಿ ಪಿ.ಸ್ಮಾರಕ ಸರ್ಕಾರಿ ಶಾಲೆ ಹಾಗೂ ತ್ರಿಕ್ಕರಿಪುರ ಕ್ಷೇತ್ರದಲ್ಲಿ 45ನೇ ಮತಗಟ್ಟೆ ಚೀಮೇನಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುವ ‘ಪಿಂಕ್ ಬೂತ್’ ಚಟುವಟಿಕೆ ನಡೆಸಿತ್ತು.

    ಕಾಸರಗೋಡು ಕೂಡ್ಲು ಶಾಲೆಯಲ್ಲಿ ಹಸಿರು ಸಂಹಿತೆಯೊಂದಿಗೆ ಪಾರಂಪರಿಕ ಶೈಲಿಯಲ್ಲಿ ಮತಗಟ್ಟೆ ಅಲಂಕರಿಸಲಾಗಿತ್ತು. ಎನ್‌ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಕಡಂಬಾರು ಶಾಲೆಯಲ್ಲಿ, ಐಕ್ಯರಂಗ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಪಡನ್ನಕ್ಕಾಡ್ ಶಾಲೆಯಲ್ಲಿ, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ನೆಲ್ಲಿಕುಂಜೆ ಬಾಲಕಿಯರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಉದುಮ ಶಾಸಕ ಸಿ.ಎಚ್.ಕುಞಂಬು ಅಣಂಗೂರಿನ ನಗರಸಭಾ ಸರ್ಕಾರಿ ಎಲ್‌ಪಿ ಶಾಲೆಯಲ್ಲಿ ಹಕ್ಕು ಚಲಾಯಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮತ ಚಲಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts