More

    ಅಧಿಕಾರಿಗಳು ಎಚ್ಚರದಿಂದ ಕರ್ತವ್ಯ ನಿರ್ವಹಿಸಲಿ : ಚನ್ನಗಿರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಸೂಚನೆ

    ಚನ್ನಗಿರಿ: ಮತಗಟ್ಟೆಯ ಅಧಿಕಾರಿಗಳು ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರದಿಂದ ಇರಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಎಸ್. ರವಿ ಸೂಚಿಸಿದರು.

    ಪಟ್ಟಣದ ಶಿವಲಿಂಗೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ಚುನಾವಣೆ ಆರಂಭದ ದಿನದಿಂದ ಮತದಾನ ಮುಗಿಸಿ ಇವಿಎಂ ವಾಪಸ್ ನೀಡುವ ತನಕ ತುಂಬ ಎಚ್ಚರಿಕೆಯಿಂದ ಇರಬೇಕು. ಪಿಆರ್‌ಒ ಪುಸ್ತಕದಲ್ಲಿ ಇರುವ ಎಲ್ಲ ಮಾಹಿತಿ ಸರಿಯಾಗಿ ಓದಿಕೊಳ್ಳಬೇಕು. ಅನುಮಾನಗಳಿದ್ದರೆ ಬಗೆಹರಿಸಿಕೊಳ್ಳಿ ಎಂದರು.

    ಚುನಾವಣೆ ನೀತಿ ಬಿಗಿಯಾಗಿದ್ದು ನಿರ್ಲಕ್ಷೃ ಮಾಡಬಾರದು. ಈಗಾಗಲೇ ಮತದಾನ ನಡೆದ ಸ್ಥಳಗಳಲ್ಲಿ ತಪ್ಪುಗಳು ಆಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡದೆ, ಚುನಾವಣೆ ಮಾಹಿತಿ ಪ್ರಕಾರ ಕರ್ತವ್ಯ ನಿರ್ವಹಿಸಬೇಕು. ನಿಮ್ಮೊಂದಿಗೆ ನಾವು ಇರುತ್ತೇವೆ ಎಂದರು.

    ಚನ್ನಗಿರಿ, ತಾವರೆಕೆರೆ, ಸಂತೇಬೆನ್ನೂರು ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆ ಮಾಡಲು ಆಯ್ಕೆ ಮಾಡಲಾಗಿದೆ. ಸಂತೇಬೆನ್ನೂರನ್ನು ಅಂಗವಿಕಲರ ಮತಗಟ್ಟೆ ಮತ್ತು ಸಖಿ ಮತಗಟ್ಟೆಗೆ ಆಯ್ಕೆ ಮಾಡಲಾಗಿದೆ ಎಂದರು.

    ಪ್ರತಿ ಮತಗಟ್ಟೆಯಲ್ಲೂ ಅಗತ್ಯ ಸೌಕರ್ಯ ಕಲ್ಪಿಸಿದೆ. ಮತದಾನ ಬಿಟ್ಟು ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗಬಾರದು. ಮತಗಟ್ಟೆಗಳಲ್ಲಿ ಮೊಬೈಲ್ ಬಳಸುವಂತಿಲ್ಲ ಎಂದರು.

    ತಹಸೀಲ್ದಾರ್ ಪಿ.ಎಸ್. ಎರ‌್ರಿಸ್ವಾಮಿ, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಪಿ.ಕೆ. ಉತ್ತಮ್, ಕೃಷಿ ಸಹಾಯಕ ನಿರ್ದೇಶಕ ಶ್ರೀಕಾಂತ್, ಉಪನ್ಯಾಸಕ ರಾಮನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts