More

    ಒಂದೂವರೆ ವರ್ಷದ ಮಗುವನ್ನು ತುಳಿದು, ಅತ್ತೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಸೊಸೆಯ ವಿಡಿಯೋ ವೈರಲ್​

    ಭುವನೇಶ್ವರ್​: ಒಬ್ಬ ಮಹಿಳೆ ಎಷ್ಟೇ ಕ್ರೂರಿಯಾಗಿದ್ದರೂ ಕೂಡ ತನ್ನ ಮಕ್ಕಳ ವಿಚಾರದಲ್ಲಿ ಹಾಗಿರುವುದಿಲ್ಲ. ಆದರೆ ಇಲ್ಲೋರ್ವ ಮಹಿಳೆ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾಳೆ. ಅಷ್ಟೇ ಅಲ್ಲ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
    ಈ ಮಹಿಳೆ ತನ್ನ 15 ತಿಂಗಳಗಂಡು ಮಗು ಹಾಗೂ ಅತ್ತೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಕೂಡ ಆಗಿದೆ.

    ರೋಜಾಲಿನ್ ನಾಯಾಕ್​ ಎಂಬುದು ಈಕೆಯ ಹೆಸರು. ತನ್ನ ಪುಟ್ಟ ಮಗು ಮತ್ತು ಅತ್ತೆಯ ಮೇಲೆ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೇ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

    ತನ್ನದೇ ಸ್ವಂತ ಮಗುವಿಗೆ ಕೈ-ಕಾಲು ಕಟ್ಟಿ ಒದೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ರೋಜಾಲಿನ್​​ಳ ಪತಿ ಚಕ್ರಧರ್​ ನಾಯಕ್ ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ತಾವು ಮನೆಯಲ್ಲಿ ಇಲ್ಲದ ಹೊತ್ತಲ್ಲಿ ಪತ್ನಿ ಮಗು ಹಾಗೂ ತನ್ನ ತಂದೆ- ತಾಯಿಗೆ ಹಿಂಸೆ ನೀಡುತ್ತಾಳೆ ಎಂಬುದನ್ನು ಅಕ್ಕಪಕ್ಕದ ಮನೆಯವರಿಂದ ಕೇಳಿದ್ದ ಅವರು, ಅದನ್ನು ಕಂಡುಹಿಡಿಯಲು ಈ ಉಪಾಯ ಕಂಡುಕೊಂಡಿದ್ದರು.

    ನಾನು ಚಿಕ್ಕದೊಂದು ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇನೆ. ನಾನು ಅಂಗಡಿಗೆ ಬರುತ್ತಿದ್ದಂತೆ ಅಲ್ಲಿ ನನ್ನ ಹೆಂಡತಿ ನನ್ನ ತಂದೆ ತಾಯಿಗೆ ಹೊಡೆಯುತ್ತಾಳೆ ಎಂಬ ವಿಚಾರವನ್ನು ಕೆಲವರಿಂದ ಕೇಳಿದ್ದೆ ಹಾಗಾಗಿಯೇ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ಶಾಸಕಿ ಭಾರತದ ನಕ್ಷೆ ಕಾಪಿ-ಪೇಸ್ಟ್‌ ಮಾಡುವಾಗ ಕಾಶ್ಮೀರ ಬಿಟ್ಟುಹೋಯಿತಂತೆ!

    ಈ ಬಗ್ಗೆ ಮಹಿಳೆ ಬೇರೆಯದೇ ಆರೋಪ ಮಾಡಿದ್ದಾರೆ. ನನ್ನನ್ನು ನನ್ನ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ತಿನ್ನಲು ಆಹಾರವನ್ನೂ ಕೊಡುತ್ತಿಲ್ಲ ಎಂದು ಹೇಳಿದ್ದಾರೆ.

    ಇದೀಗ ಪುರಿ ಮಕ್ಕಳ ಕಲ್ಯಾಣ ಸಮಿತಿ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿದೆ. ರೋಜಾಲಿನ್​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಶೀಘ್ರವೇ ಬಂಧಿಸುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

    ಡಿಜೆಹಳ್ಳಿ ವಿವಾದ: ಕಂ‌ಪ್ಲೇಂಟ್‌ನಲ್ಲಿ ಯೂ ಟರ್ನ್-‌ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಪಾಷಾ ದೂರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts