ಮತ್ತೊಮ್ಮೆ ಬಡ ವ್ಯಕ್ತಿಗೆ ಉಚಿತ ಆಪರೇಷನ್​ ಮಾಡುವ ಮೂಲಕ ಜನ ಮನ ಗೆದ್ದ ಕುಣಿಗಲ್​ ಶಾಸಕ

Kunigal MLA
Published on

ತುಮಕೂರು: ಮತ್ತೊಮ್ಮೆ ಬಡ ವ್ಯಕ್ತಿಗೆ ಉಚಿತವಾಗಿ ಆಪರೇಷನ್​ ಮಾಡುವ ಮೂಲಕ ಕುಣಿಗಲ್​ ಕ್ಷೇತ್ರದ ಕಾಂಗ್ರೆಸ್​ ಶಾಸಕ ಡಾ. ರಂಗನಾಥ್​ ಅವರು ಜನರ ಮನ ಗೆದ್ದಿದ್ದಾರೆ.

ಕುಣಿಗಲ್ ತಾಲೂಕಿನ ಯಡವಾಣಿ ಗ್ರಾಮದ ಶಿವನಂಜಯ್ಯ ಎಂಬವರು ಹಲವು ದಿನಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದರು. ಹೀಗಾಗಿ ತಮ್ಮ ಕ್ಷೇತ್ರದ ಶಾಸಕರಾಗಿರುವ ರಂಗನಾಥ್​ ಅವರ ಬಳಿ ಹಣ ಸಹಾಯ ಕೋರಿದ್ದರು.

ಸ್ವತಃ ವೈದ್ಯರಾಗಿರುವ ಡಾ. ರಂಗನಾಥ್​, ಬಡ ವ್ಯಕ್ತಿಯ ಮನವಿಗೆ ತಕ್ಷಣವೇ ಸ್ಪಂದಿಸಿದರು. ತಾವೇ ಖುದ್ದಾಗಿ ಆಪರೇಷನ್ ಮಾಡಲು ಮುಂದಾದರು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಶಿವನಂಜಯ್ಯ ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.

ಈ ಹಿಂದೆ ರಂಗನಾಥ್​ ಅವರು ಬಡ ಮಹಿಳೆಯೊಬ್ಬಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮನೆ ಮಾತಾಗಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net