

ಹಾವೇರಿ: ಕೆಎಸ್ಆರ್ಟಿಸಿ ಬಸ್ ಚಾಲಕನೊಬ್ಬ ಮಠದ ಆವರಣದಲ್ಲೇ ನೇಣುಬಿಗಿದುಕೊಂಡು ಮೃತಪಟ್ಟ ಘಟನೆ ರಾಣೇಬೆನ್ನೂರು ತಾಲೂಕಿನ ಮಣಕೂರು ಗ್ರಾಮದಲ್ಲಿ ಸಂಭವಿಸಿದೆ.
ಗೋಪಾಲಯ್ಯ ಜಕ್ಕರಡ್ಡಿ(45) ಆತ್ಮಹತ್ಯೆ ಮಾಡಿಕೊಂಡವ. ಸಾರಿಗೆ ಬಸ್ ಚಾಲಕನಾಗಿದ್ದ ಈತ ಇತ್ತೀಚಿಗೆ ವೇತನ ಸರಿಯಾಗಿ ಆಗಲಿಲ್ಲ ಎಂದು ಸಾಲ ಮಾಡಿಕೊಂಡಿದ್ದ. ಈಗ ಸಾಲಕ್ಕೆ ಹೆದರಿ ಮಠದ ಆವರಣದ ಮುಂದಿದ್ದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆ ಬಳಿಕ ಸಾರಿಗೆ ನೌಕರನ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಇದನ್ನೂ ಓದಿರಿ ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ