

ಬೆಂಗಳೂರು: ರೆಸ್ಟ್ ಆಫ್ ದಿ ವರ್ಲ್ಡ್ (RoW) ಎಂಬ ಅಂತಾರಾಷ್ಟ್ರೀಯ ಲಾಭರಹಿತ ಪತ್ರಿಕೋದ್ಯಮ ಸಂಸ್ಥೆಯು ಕೂ ಅಪ್ಲಿಕೇಷನ್ ಸಹ-ಸಂಸ್ಥಾಪಕ ಮತ್ತು ಸಿಇಒ ಕೂಡ ಆಗಿರುವ ಬೆಂಗಳೂರು ಮೂಲದ ಅಪ್ರಮೇಯ ರಾಧಾಕೃಷ್ಣ ಅವರನ್ನು ಜಗತ್ತಿನ ಟಾಪ್-100 ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನ ನಾಯಕರಲ್ಲಿ ಒಬ್ಬರೆಂದು ಗುರುತಿಸಿದೆ.
ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಯನ್ನು ಸಕ್ರಿಯಗೊಳಿಸುವ ಕೂ ವೇದಿಕೆಯ ಮೌಲ್ಯಯುತ ಪ್ರತಿಪಾದನೆ ಲಕ್ಷಾಂತರ ಜನರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತ, ನೈಜ ಜಾಗತಿಕ ಸಮಸ್ಯೆಯನ್ನು ಪರಿಹರಿಸುವ ನವೀನ ಆವಿಷ್ಕಾರವೆಂದು ಗುರುತಿಸಲ್ಪಟ್ಟಿದೆ. ಹೀಗಾಗಿ ಕೂ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅನನ್ಯ ಸವಾಲುಗಳನ್ನು ಜಯಿಸುತ್ತ ಸಮುದಾಯಕ್ಕಾಗಿ ಉತ್ತಮ ಉತ್ಪನ್ನಗಳನ್ನು ನಿರ್ಮಿಸುತ್ತಿರುವ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ RoWನಿಂದ ಗುರುತಿಸಲ್ಪಟ್ಟಿದ್ದಾರೆ.
ಪಾಶ್ಚಿಮಾತ್ಯ ದೇಶಗಳ ಹೊರಗಿನ ಡೈನಮಿಕ್ ಉದ್ಯಮಿಗಳು, ನವೋದ್ಯಮಿಗಳು ಮತ್ತು ಹೂಡಿಕೆದಾರರು ಹಾಗೂ ಅವರ ಜಾಗತಿಕ ಸಮುದಾಯಗಳನ್ನು ಬದಲಾಯಿಸುವ ಅತ್ಯುತ್ತಮ ಕೊಡುಗೆಗಳನ್ನು ತಿಳಿಸುವ ರಾಯಭಾರಿಯಾದ RoW100: ಗ್ಲೋಬಲ್ ಟೆಕ್ ಚೇಂಜ್ ಮೇಕರ್ಸ್ನ "ಸಂಸ್ಕೃತಿ ಮತ್ತು ಸಾಮಾಜಿಕ ಮಾಧ್ಯಮ" ವಿಭಾಗದಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಉದ್ಯಮಿ ಆಗಿ ಎಂಬ ಹೆಗ್ಗಳಿಕೆಗೂ ಅಪ್ರಮೇಯ ಪಾತ್ರರಾಗಿದ್ದಾರೆ. ರೆಸ್ಟ್ ಆಫ್ ವರ್ಲ್ಡ್ನಂಥ ಪ್ರತಿಷ್ಠಿತ ಸಂಸ್ಥೆಯಿಂದ ಗುರುತಿಸಲ್ಪಟ್ಟಿರುವುದು ನಮಗೆ ನಿಜಕ್ಕೂ ಹೆಮ್ಮೆ ತಂದಿದೆ ಎಂದು ಅಪ್ರಮೇಯ ತಿಳಿಸಿದ್ದಾರೆ.