ವಿದ್ಯುತ್ ಸ್ಪರ್ಶದಿಂದಾಗಿ 'ಜೂನಿಯರ್ ರವಿಚಂದ್ರನ್​' ಸಾವು...

Jnr Ravichandran
Published on

ತುಮಕೂರು: 'ಜೂನಿಯರ್ ರವಿಚಂದ್ರನ್'​ ಎಂದೇ ಹೆಸರಾಗಿದ್ದ ಆರ್ಕೆಸ್ಟ್ರಾ ಕಲಾವಿದ ಲಕ್ಷ್ಮೀನಾರಾಯಣ್​ ಎಂಬವರು ವಿದ್ಯುತ್ ಶಾಕ್​ನಿಂದಾಗಿ ಸಾವಿಗೀಡಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೆರೂರು ಗ್ರಾಮದ ನಿವಾಸಿ ಲಕ್ಷ್ಮೀನಾರಾಯಣ್​ (35) ಸಾವಿಗೀಡಾದವರು. ಇವರು ಇಂದು ಸಂಪ್​ಗೆ ನೀರು ತುಂಬಿಸಲು ಮೋಟರ್ ಆನ್​ ಮಾಡುವ ಸಂದರ್ಭದಲ್ಲಿ ವಿದ್ಯುತ್​ ಪ್ರವಹಿಸಿ ಮೃತಪಟ್ಟಿದ್ದಾರೆ.

ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದನಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮೀನಾರಾಯಣ್, ರವಿಚಂದ್ರನ್ ಅವರನ್ನು ಹೋಲುತ್ತಿದ್ದುದರಿಂದ ಮತ್ತು ಅವರಂತೆಯೇ ವೇಷಭೂಷಣ ಹೊಂದಿದ್ದರಿಂದ ಅವರು 'ಜೂನಿಯರ್ ರವಿಚಂದ್ರನ್' ಎಂದೇ ಕರೆಯಲ್ಪಡುತ್ತಿದ್ದರು. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net