ಜೆ.ಪಿ. ನಡ್ಡಾ ಭೇಟಿಯಾದ ಕೋಲಾರ ಸಂಸದ ಮುನಿಸ್ವಾಮಿ! ಸಿಗಲಿದ್ಯಾ ಟಿಕೆಟ್​?

WhatsApp Image 2024-03-22 at 10.08.44 PM
Published on

ಕೋಲಾರ: ಮುಂದುವರೆದ ಕೋಲಾರದ ಸಸ್ಪೆನ್ಸ್! ಕುತೂಹಲ ಮೂಡಿಸುತ್ತಿದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಸಂಸದ ಮುನಿಸ್ವಾಮಿ ಭೇಟಿ. ಕೋಲಾರ ಕ್ಷೇತ್ರ ಜೆಡಿಎಸ್​ಗೆ ಬಿಟ್ಟು ಕೊಡಬೇಡಿ ಎಂದು ಮನವಿ ಮಾಡಲಾಗಿದೆ.

ಅವಿಭಜಿತ ಕೋಲಾರ ಕ್ಷೇತ್ರದಲ್ಲಿ ಎಲ್ಲಾ ಜೆಡಿಎಸ್ ಶಾಸಕರು ಇದ್ದರೂ ಎಂಪಿ ಸ್ಥಾನ ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ. ಬಿಜೆಪಿ ಪಕ್ಷ ಗೆಲ್ಲಲು ಈ ಬಾರಿ ಹೆಚ್ವು ಅವಕಾಶಗಳು ಇವೆ. ಅಲ್ಲದೇ ಎಸ್​ಸಿ ಬಲ ಸಮುದಾಯದಿಂದ ದಕ್ಷಿಣ ಭಾರತದಲ್ಲಿ ಇರುವುದು ತಾವೊಬ್ಬರೇ, ಹಾಗಾಗಿ ಕ್ಷೇತ್ರ ಬಿಜೆಪಿ ಉಳಿಸಿಕೊಳ್ಳಬೇಕು ಎಂದು ನಡ್ಡಾರಿಗೆ ಮನವಿ ಮಾಡಿದ್ದಾರೆ.

ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆದಿದ್ದು, ಕಳೆದ 4 ದಿನಗಳಿಂದ ದೆಹಲಿಯಲ್ಲೇ ಮುನಿಸ್ವಾಮಿ ಬಿಡು ಬಿಟ್ಟಿದ್ದಾರೆ. ಈ ಸುದೀರ್ಘ ಮಾತುಕತೆ ಯಾವ ನಿರ್ಧಾರಕ್ಕೆ ಎಡಮಾಡಿಕೊಡಲಿದೆ ಎಂಬುದೇ ಕಾತರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net