ರಾಜ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

Untitled design - 2023-08-16T180014.930
Published on

ಹಾಸನ: ರಾಜ್ಯ ಸರ್ಕಾರ ಮತ್ತು ಮಳೆಯ ಪರಿಸ್ಥಿತಿಗಳ ಕುರಿತು ಭವಿಷ್ಯ ನುಡಿದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ರಾಜ್ಯದಲ್ಲಿ ಮಳೆಯಾಗಲಿದೆ. ಆದ್ರೆ, ತೊಂದರೆ ಏನಿಲ್ಲ ಎಂದು ಹೇಳಿದರು.

"ಈ ಹಿಂದೆ ಒಂದು ಸಾರಿ ಮಳೆ ಬಂದಂತೆ, ಮತ್ತೊಂದು ಬಾರಿ ಮಳೆ‌ಯಾಗಲಿದೆ. ಮಳೆಗೇನು ತೊಂದರೆಯಿಲ್ಲ, ಕಾಲ‌ ಹೇಳ್ತಿನಿ, ಅಷ್ಟೇ! ಮಳೆ‌ ಬರಲಿದೆ. ಅನ್ನಕ್ಕೆ ಯಾವುದೇ ತೊಂದರೆ ಇಲ್ಲಾ. ವಿಪರೀತ ಮಳೆಯಾಗುವ ಲಕ್ಷಣವಿದೆ, ಬೇಕಾದಷ್ಟು ಮಳೆ ಬೀಳಲಿದೆ. ಇನ್ನೂ ಗುಡುಗು, ಭೂಮಿ ಬಿರುಕಾಗುವುದು, ದ್ವೇಷಗಳು ಹೆಚ್ಚುತ್ತವೆ, ಅಪಮೃತ್ಯು ಎಲ್ಲಾ ಸಂಭವಿಸುತ್ತದೆ" ಎಂದು ಹೇಳಿದರು.

"ಪ್ರಕೃತಿಯಿಂದಲೂ ಹಾನಿಯಿದೆ. ಶ್ರಾವಣದಲ್ಲೇ ಮಳೆಯ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ. ಶ್ರಾವಣದ‌ ಮಧ್ಯಭಾಗದ ಮೇಲೆ ಕಾರ್ತಿಕದವರೆಗೂ ಮಳೆಯಾಗಲಿದೆ. ಮತ್ತೆ ಮಳೆಯಿಂದ ಅಪಾಯದ ಮುನ್ಸೂಚನೆಗಳಿವೆ. ರಾಜ್ಯ ಸರ್ಕಾರದ ಬಗ್ಗೆಯೂ ಭವಿಷ್ಯ ನುಡಿದ ಕೋಡಿಶ್ರೀ, ಸ್ಮಶಾನದಲ್ಲಿ ಪಿಶಾಚಿ ಕುಣಿದಂತಾಗಿದೆ. ಏನು ಆಗುವುದಿಲ್ಲ. ನೋಡುವವರಿಲ್ಲ, ಕೇಳುವವರಿಲ್ಲ, ಆನಂದ ಪಡುವವರಿಲ್ಲ" ಎಂದು ಹೇಳಿದರು.

"ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಪಾರ್ಲಿಮೆಂಟ್ ಎಲೆಕ್ಷನ್‌ ಆದ ನಂತರ ತೀರ್ಮಾನವಾಗಲಿದೆ. ಪಾರ್ಲಿಮೆಂಟ್ ಚುನಾವಣೆ ಬಂದಾಗ ಏನಾಗುತ್ತದೆ ಮತ್ತು ಯಾವ ಸರ್ಕಾರ ಬರಲಿದೆ ಎಂಬುದನ್ನು ಹೇಳುತ್ತೀನಿ" ಎಂದು ಭವಿಷ್ಯ ನುಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net