More

    ಅಮ್ಮಿನಬಾವಿ ಶ್ರೀಗಳಿಂದ ಲೋಕಕಲ್ಯಾಣ ಸಂಕಲ್ಪ

    ಧಾರವಾಡ: ವೀರಶೈವ ಧರ್ಮದ ಶ್ರೀ ಜಗದ್ಗುರು ಪಂಚಪೀಠಗಳ ಗುರುಪರಂಪರೆಯ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಲೋಕಕಲ್ಯಾಣ ಸಂಕಲ್ಪದೊAದಿಗೆ ಆ. ೧೭ರಿಂದ ತಿಂಗಳ ಕಾಲ ಪರ್ಯಂತ ರುದ್ರಾಭಿಷೇಕ ಸಮೇತ ಇಷ್ಟಲಿಂಗ ಮಹಾಪೂಜೆ ನಡೆಸುವರು.
    ಪ್ರಾತಃಕಾಲ ೮ ಗಂಟೆಗೆ ಇಷ್ಟಲಿಂಗ ಮಹಾಪೂಜೆ ಆರಂಭವಾಗಲಿದೆ. ಶಿವಾಷ್ಟೋತ್ತರದೊಂದಿಗೆ ನೂರೊಂದು ಬಿಲ್ವಾರ್ಚನೆ ಹಾಗೂ ಪಂಚ ವಿಧದ ಆರತಿಗಳ ವಿಶೇಷ ಪೂಜಾ ಕೈಂಕರ್ಯ ಜರುಗಲಿವೆ. ನಂತರ ಭಕ್ತಗಣದಿಂದ ಶ್ರೀಗಳ ಪಾದಪೂಜೆ ನೆರವೇರುವುದು.

    • ಪುರಾಣ ಪ್ರವಚನ: ೧೭ರಿಂದ ಸೆ. ೧೪ರವರೆಗೆ ಪ್ರತಿದಿನ ರಾತ್ರಿ ೮ರಿಂದ ೯.೩೦ರವರೆಗೆ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಹಿರೇಮಠದ ಶ್ರೀಜಡೆ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಯಿಂದ ನಾಲವತ್ತವಾಡ ಶ್ರೀ ವೀರೇಶ್ವರ ಶರಣರ ಪುರಾಣ ಪ್ರವಚನ ನಡೆಯಲಿದೆ. ಹಿರಿಯ ಶ್ರೀಗಳಾದ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಗೀತ ಕಲಾವಿದರಾದ ಮುಳಮುತ್ತಲದ ನಾಗರಾಜ ಕಾಡಸಿದ್ದಣ್ಣವರ ಹಾಗೂ ಉಪ್ಪಿನಬೆಟಗೇರಿಯ ಮಡಿವಾಳಯ್ಯ ಶಹಪೂರಮಠ ಅವರಿಂದ ನಿತ್ಯ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯುವುದು.
    • ಯುಗಮಾನೋತ್ಸವ: ಪುರಾಣ ಪ್ರವಚನ ಮತ್ತು ಶ್ರಾವಣ ಮಾಸಾಚರಣೆಯ ಮಂಗಲದ ಅಂಗವಾಗಿ ಸೆ. ೧೫ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ನಡೆಯಲಿದೆ. ಪ್ರತಿದಿನ ಬೆಳಗ್ಗೆ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಮೂಲ ಗುರುವರ್ಯರಾದ ಶ್ರೀ ಗುರುಶಾಂತಲಿAಗ ಶಿವಯೋಗಿಗಳ ಕರ್ತೃ ಗದ್ದುಗೆಗೆ ಏಕಾದಶ ರುದ್ರಾಭಿಷೇಕ ಮಹಾಪೂಜೆ ಮತ್ತು ಅಷ್ಟೋತ್ತರ ಬಿಲ್ವಾರ್ಚನೆ ನಡೆಯಲಿದೆ ಎಂದು ಶ್ರೀ ಮಠದ ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts