More

    ಗುರುಕೃಪೆಯಿಂದ ಜೀವನದ ಸಂಕಲ್ಪ ಸಾಕಾರ

    ಸೊರಬ: ಗುರುಕೃಪೆಯಿಂದ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆದುಕೊಂಡು ಬರುತ್ತಿದೆ. ಜಡೆ ಮಠಕ್ಕೂ ಅಂಡಗಿ ಶ್ರೀ ವೀರಭದ್ರೇಶ್ವರ ಸ್ವಾಮಿ ಭಕ್ತರಿಗೂ ಅವಿನಾಭಾವ ಸಂಬಂಧವಿದೆ ಎಂದು ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
    ಮಂಗಳವಾರ ತಾಲೂಕಿನ ಅಂಡಿಗೆ ಗ್ರಾಮದಲ್ಲಿ ಸಾರೆಕೊಪ್ಪ, ಸಂಪಗೋಡು, ಅಂಡಿಗೆ ಗ್ರಾಮಗಳ ಭಕ್ತರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ವೀರಭದ್ರೇಶ್ವರ ದೇವಾಲಯದ 25ನೇ ವಾರ್ಷಿಕೋತ್ಸವ, ಗುಗ್ಗುಳ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಠ-ಮಾನ್ಯಗಳು ಅಧ್ಯಾತ್ಮದ ಸಂದೇಶ ಸಾರುವ ಧಾರ್ಮಿಕ ಕೇಂದ್ರಗಳಾಗಿದ್ದು ಭಕ್ತರ ಸಹಕಾರದಿಂದ ಅವುಗಳು ಪ್ರಗತಿ ಹೊಂದಲು ಸಾಧ್ಯ. ಗುರುಕೃಪೆ ಇದ್ದರಷ್ಟೇ ನಮ್ಮ ಜೀವನದ ಸಂಕಲ್ಪಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಮಠಕ್ಕೆ ಬೆಳ್ಳಿ, ಬಂಗಾರ, ವಜ್ರ-ವೈಢೂರ್ಯಗಳು ಸಂಪತ್ತಲ್ಲ. ಅಪಾರವಾದ ಭಕ್ತ ಸಮೂಹವೇ ಮಠಗಳು ಶ್ರೀಮಂತವಾಗಲು ಕಾರಣ ಎಂದರು. ಅಶೋಕ್ ನಾಯಕ್ ಅಂಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫೆ.23ರಂದು ಡಾ.ಶ್ರೀ ಮಹಾಂತ ಸ್ವಾಮೀಜಿ ಅವರ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಸಾರೆಕೊಪ್ಪ, ಸಂಪಗೋಡು ಗ್ರಾಮಸ್ಥರು ಶ್ರೀ ಮಹಾಂತ ಸ್ವಾಮೀಜಿ ಅವರನ್ನು ಸನ್ಮಾನಿಸಿದರು.
    ಹುಬ್ಬಳ್ಳಿ ಮಠದ ಶ್ರೀ ಷಡಾಕ್ಷರಿ ಸ್ವಾಮೀಜಿ, ಗುರುನಾಥ್ ನಾಯಕ್ ಅಂಡಿಗೆ, ಜಯಶೀಲಾ ಗೌಡ, ವಿಶ್ವನಾಥ್, ರವೀಂದ್ರ, ಬಸವರಾಜ ಗೌಡ, ವಿರೇಂದ್ರಗೌಡ, ಪಕ್ಕೀರಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts