

ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣವೊಂದು ನಡೆದಿದ್ದು ಇದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ಕರಿಂದ ಐದು ಜನರು ವ್ಯಕ್ತಿಯೊಬ್ಬನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಈ ಘಟನೆ HSR ಲೇಔಟ್‍ನ ಹ್ಯಾಂಗ್ಒವರ್ ಪಬ್ ಬಳಿ ರಾತ್ರಿ ಸುಮಾರು 12 ಗಂಟೆ ಸಮಯಕ್ಕೆ ನಡೆದಿದೆ. ನಡೆದಿದೆ.
ಕಿಡ್ನ್ಯಾಪ್‍ನ ವಿಡಿಯೋ ಸೆರೆ ಆಗಿರುವ ವಿಚಾರ ಪ್ರಕರಣ ನಡೆಯುವಾಗ ಆರೋಪಿಗಳಿಗೆ ತಿಳಿದಂತೆ ಕ್ಲಿಪ್‍ನಲ್ಲಿ ತೋರುತ್ತಿಲ್ಲ. ಈ ಘಟನೆ ನಡೆಯುವಾಗ ವ್ಯಕ್ತಿಯೊಬ್ಬರು ಅಲ್ಲೇ ನಿಂತಿದ್ದ ಕಾರೊಂದರಲ್ಲಿ ಕುಳಿತಿದ್ದರು. ಈ ಸಂದರ್ಭ ಗಲಾಟೆಯನ್ನು ಗಮನಿಸಿದ ಅವರು, ಪ್ರಕರಣವನ‍್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.
ಹಣಕಾಸು ವಿಚಾರದಲ್ಲಿ ಗಲಾಟೆ ನಡೆದಿದ್ದು ಈ ಹಿನ್ನೆಲೆಯಲ್ಲಿ ಕಿಡ್ನ್ಯಾಪ್ ಆಗಿರುವ ಬಗ್ಗೆ ಮಾಹಿತಿ ಲಭಿಸಿದ್ದು ಘಟನೆ ಸಂಬಂಧಿಸಿದಂತೆ ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಡ್ನ್ಯಾಪ್ ನಡೆಸಿರುವ ಕಾರು ದೆಹಲಿಯ ರಿಜಿಸ್ಟ್ರೇಷನ್ ಹೊಂದಿದೆ ಎಂದು ತಿಳಿದುಬಂದಿದೆ. ತನಿಖೆ ನಡೆಸುತ್ತಿರುವ ಪೊಲೀಸರು, ಕಿಡ್ನ್ಯಾಪ್ ಆಗಿರುವ ವ್ಯಕ್ತಿಯ ರಕ್ಷಣೆ ಮಾಡಿ ಅರೋಪಿಗಳ ಬಂಧನಕ್ಕೆ ಯತ್ನಿಸುತ್ತಿದ್ದಾರೆ.
Video: