More

    ‘ನಾವು ದೇಶವನ್ನು ಮತ್ತೆ ಕಟ್ಟಬೇಕು’; ಆಫ್ಘಾನಿಸ್ತಾನದ ಪುಟ್ಟ ಬಾಲಕಿಯ ಮನಕಲುಕುವ ಮಾತು ವೈರಲ್!

    ನವದೆಹಲಿ: ತಾಲಿಬಾನ್ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗಿನಿಂದ, ಅಲ್ಲಿ ಹುಡುಗಿಯರನ್ನು ಶಾಲೆಗೆ ಹೋಗುವುದನ್ನು ನಿಷೇಧಿಸುವುದು ಸೇರಿದಂತೆ ಹೆಣ್ಮಕ್ಕಳ ವಿರುದ್ಧ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಆಫ್ಘಾನಿಸ್ತಾನದ ಹುಡುಗಿಯರು ಶಾಲೆಗೆ ಹೋಗುವ ಕನಸು ಕಾಣುತ್ತಿದ್ದು, ತನ್ನ ತಂದೆಯೊಂದಿಗೆ ಪುಟ್ಟ ಹುಡುಗಿಯ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ.

    ಅವಳು ಯಾಕೆ ಅಸಮಾಧಾನಗೊಂಡಿದ್ದಾಳೆಂದು ತಂದೆ ಬಾಲಕಿಯನ್ನು ಕೇಳಿದಾಗ “ನೀವು ನನ್ನನ್ನು ಶಾಲೆಗೆ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದೀರಿ” ಎಂದು ಹುಡುಗಿ ಪ್ರತಿಕ್ರಿಯಿಸಿದಳು. ಅದಕ್ಕೆ ಆ ವ್ಯಕ್ತಿ, “ಹುಡುಗರು ಮಾತ್ರ ಶಾಲೆಗೆ ಹಾಜರಾಗುವುದರಿಂದ ನಾನು ನಿನ್ನ ಸಹೋದರನನ್ನು ಶಾಲೆಗೆ ಸೇರಿಸುತ್ತೇನೆ” ಎಂದು ಹೇಳಿದರು.

    ನಂತರ ಹುಡುಗಿ ತನ್ನ ತಂದೆಗೆ “ಹುಡುಗಿಯರು ಶಾಲೆಗೆ ಹಾಜರಾಗಬೇಕು. ಪುರುಷರ ಕೆಲಸ ಬರೀ ನಾಶ ಮಾಡುವುದು” ಎಂದು ಹೇಳಿದ್ದಾಳೆ. ಅದಕ್ಕೆ ಮರು ಪ್ರಶ್ನಿಸಿದ ತಂದೆ, “ಪುರುಷರು ನಾಶಪಡಿಸಿದ ವಿಷಯಗಳು ಯಾವುವು?” ಎಂದು ಕೇಳಿದ್ದಾರೆ. ಅದಕ್ಕೆ ಆ ಪುಟ್ಟ ಬಾಲಕಿ, “ಹೋಗಿ ಕಾಬೂಲ್‍ನಿಂದ ಕಂದಹಾರದವರೆಗೆ, ನೀವು ಎಷ್ಟು ಸ್ಥಳಗಳನ್ನು ನಾಶಪಡಿಸಿದ್ದೀರಿ ಎಂದು ನೀವೇ ನೋಡಿ” ಎಂದಿದ್ದಾಳೆ.

     

     
     
     
     
     
    View this post on Instagram
     
     
     
     
     
     
     
     
     
     
     

     

    A post shared by The Afghan (@theafghan)

    Instagram ಪೇಜ್‍ಪಂದರಲ್ಲಿ ಆಫ್ಘಾನ್ ಹುಡುಗಿಯ ವಿಡಿಯೋವನ್ನು ಹಂಚಿಕೊಂಡು “ ಈ ಸ್ಪೂರ್ತಿದಾಯಕ ವಿಡಿಯೋದಲ್ಲಿ, ಅಫಘಾನ್ ತಂದೆ ತಮಾಷೆಯಾಗಿ ತನ್ನ ಮಗಳಿಗೆ ಶಾಲೆಯು ಹುಡುಗರಿಗೆ ಮಾತ್ರ ಎಂದು ಹೇಳುತ್ತಾನೆ. ಆದರೆ ಈ ಗಮನಾರ್ಹ ಹುಡುಗಿ ಬುದ್ಧಿವಂತಿಕೆ ಮತ್ತು ದೃಢ ನಿಶ್ಚಯದಿಂದ ಪ್ರತಿಕ್ರಿಯಿಸುತ್ತಾಳೆ. ಆ ಪುಟ್ಟ ಶಿಕ್ಷಣವು ಎಲ್ಲರಿಗೂ ಸಿಗಬೇಕು ಎಂದು ಪ್ರತಿಪಾದಿಸಿದ್ದಾಳೆ. ಆಕೆ ಎಲ್ಲಾ ಆಫ‍್ಘಾನ್ ಹುಡುಗಿಯರಿಗೆ ಶಿಕ್ಷಣ ಸಿಗುವುದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ್ದಾಳೆ. ದುಃಖಕರವೆಂದರೆ, ಆಫ್ಘಾನ್ ಹುಡುಗಿಯರಿಗೆ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಪ್ರವೇಶವನ್ನು ನಿರಾಕರಿಸಿ ಇದು ಒಂದು ವರ್ಷಕ್ಕೂ ಹೆಚ್ಚಿನ ಸಮಯ ಕಳೆದಿದೆ. ಈ ವಿಡಿಯೋ 2.47 ಲಕ್ಷ ವೀವ್ಸ್ ಸಂಗ್ರಹಿಸಿದೆ. ನೆಟಿಜೆನ್‍ಗಳು ಕ್ಲಿಪ್‍ನಿಂದ ಸ್ಫೂರ್ತಿ ಪಡೆದಿದ್ದಾರೆ.

    “ ಮಹಿಳೆಯರು ಈ ದೇಶವನ್ನು ಪುನರ್ನಿರ್ಮಿಸಲು ಅವಕಾಶ ಮಾಡಿಕೊಡುತ್ತಾರೆ” ಎಂದು ಆ ಬಾಲಕಿ ಹೇಳಿದಾಗ, ಹೃದಯ ಕರಗಿ ಬಿಡುತ್ತದೆ… ಧೈರ್ಯಶಾಲಿ, ಬುದ್ಧಿವಂತ ಹುಡುಗಿಯನ್ನು ಬೆಳೆಸುತ್ತಿರುವ ತಂದೆಗೆ ಅಭಿನಂದನೆಗಳು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts