

ಬೆಂಗಳೂರು: ಈತ, ಕಳೆದ ಏಳು ವರ್ಷಗಳಿಂದ ಕಳ್ಳತನದ ಅಪರಾಧಕ್ಕಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಆದರೆ ಈತ ಹೊರಬಂದ ಕೂಡಲೆ ಹಳೆ ಚಾಳಿಯನ್ನು ಮುಂದುವರೆಸಿದ್ದ.
ಇದೀಗ ಬೆಂಗಳೂರಿನ ಜೆಪಿ ನಗರ ಪೊಲೀಸರಿಂದ ಇತಿಹಾಸದ ಕುಖ್ಯಾತ ಅರೋಪಿ ಬಂಧನ ನಡೆದಿದೆ. ಬಂಧಿತ, ಮಹಮದ್ ದಸ್ತಗಿರ್ ಅಲಿಯಾಸ್ ಶೂಟೌಟ್ ದಸ್ತಗಿರ್ ಅಲಿಯಾಸ್ ದಸ್ತು ಎಂಬಾತ. ಆರೋಪಿ ಕಳೆದ ಕಲ ದಿನಗಳ ಹಿಂದೆ ಇಬ್ಬರು ವಾಸ ಮಾಡ್ತಿದ್ದ ಮಹಿಳೆಯರ ಮನೆಗೆ ನುಗ್ಗಿದ್ದ. ಅಲ್ಲಿ ಚಾಕು ತೋರಿಸಿ ಬೆದರಿಸಿ ಚಿನ್ನದ ಸರಗಳು ಮತ್ತು ಉಂಗುರಗಳನ್ನು ದೋಚಿ ಪರಾರಿಯಾಗಿದ್ದ.
ಅಷ್ಟಕ್ಕೇ ನಿಲ್ಲದೇ ಈತ ಮರುದಿನ ಜಯನಗರದಲ್ಲಿ ಓರ್ವ ಮಹಿಳೆಯ ಸರವನ್ನು ಕದ್ದು ಕಾಲ್ಕಿತ್ತಿದ್ದ. ದರೋಡೆ ನಡೆದ ಮನೆಯಲ್ಲಿ ಪೊಲೀಸರು ಮಾಹಿತಿ ಪಡೆದಾಗ ದಸ್ತಗಿರ್ ಮೇಲೆ ಅನುಮಾನ ಹುಟ್ಟಿದ್ದು ತನಿಖೆ ನಡೆಸಿದಾಗ ಕೃತ್ಯ ಎಸಗಿದ್ದು ಈತನೇ ಎನ್ನುವುದು ಖಚಿತವಾಗಿದೆ.
ಆರೋಪಿ ದಸ್ತಗಿರ್ ವಿರುದ್ದ, ಜಯನಗರ ಒಂದು ಕಳ್ಳತನ, ಕಬ್ಬನ್ ಪಾರ್ಕ್ನಲ್ಲಿ ಒಂದು ಕೊಲೆಯತ್ನ, ಒಂದು ರಾಬರಿ, ಕುಮಾರಸ್ವಾಮಿ ಲೇಔಟ್ನಲ್ಲಿ ಎರಡು ಕೊಲೆ ಯತ್ನ ಹಾಗೂ ಐದು ರಾಬರಿ ಕೇಸ್ಗಳು ಸೇರಿ ಒಟ್ಟು ಹತ್ತಕ್ಕೂ ಕೇಸ್ಗಳು ಇದ್ದವು. ಈ ಹಿಂದೆ 2012ರಲ್ಲಿ ಕುಮಾರಸ್ವಾಮಿ ಲೇಔಟ್ನ ಪೊಲೀಸರು ದಸ್ತಗಿರಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದರು.
ಬಳಿಕ ರಾಬರಿ ಕೇಸ್ ನಲ್ಲಿ ಏಳು ವರ್ಷ ಶಿಕ್ಷೆ ಆಗಿತ್ತು. ಮೊನ್ನೆ ಬ್ರಕಿದ್ಗೂ ಎರಡು ದಿನ ಇರುವಾಗ ಬೆಳಗಾವಿ ಜೈಲಿನಿಂದ ಬಿಡುಗಡೆ ಆಗಿ ಬಂದಿದ್ದ. ಹೊರಬಂದು ಕೆಲ ದಿನಗಳಲ್ಲಿ ಮತ್ತೆರಡು ಎರಡು ಕೇಸ್ ಮಾಡಿದ್ದ. ಸದ್ಯ ಮತ್ತೊಮ್ಮೆ ಜೆಪಿ ನಗರ ಪೊಲೀಸರು ಈತನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದಾರೆ.