More

    ಟ್ವಿಟರ್ ಎದುರು ಸೋಲುತ್ತಿದೆಯಾ ಥ್ರೆಡ್ಸ್? ಆಶ್ಚರ್ಯಕರ ಮಾಹಿತಿ ಬಿಚ್ಚಿಟ್ಟ ಗೂಗಲ್ ಟ್ರೆಂಡ್ಸ್!

    ನವದೆಹಲಿ: ಮೆಟಾ ಸಂಸ್ಥೆಯ ಕ್ರಾಂತಿಕಾರಿ ಸಾಮಾಜಿಕ ಜಾಲತಾಣ ‘ಥ್ರೆಡ್ಸ್’ ಟ್ವಿಟರ್ ಗೆ ಟಕ್ಕರ್‍ ನೀಡಿಯೇ ಬಿಟ್ಟಿತೇನೋ ಎನಿಸುವಂತೆ ಟ್ರೆಂಡ್ ಸೃಷ್ಟಿಸಿ ಬಿಟ್ಟಿತ್ತು. ಆದರೆ ಈಗ ಆ ಟ್ರೆಂಡ್‍ನಲ್ಲಿ ಬದಲಾವಣೆ ಕಂಡುಬಂದಿದೆ.

    ಕೆಲವರು ಮಸ್ಕ್ ಅವರ ವಿವಾದಾತ್ಮಕ ಟ್ವಿಟರ್ ವರ್ತನೆಗಳನ್ನು ಥ್ರೆಡ್ಸ್ ಯಶಸ್ಸಿನ ರಹಸ್ಯ ಅಸ್ತ್ರವೆಂದು ಹೇಳಿದರೆ, ಗೂಗಲ್‍ ಟ್ರೆಂಡ್ಸ್ ಮಾತ್ರ ಬೇರೆಯೇ ಕಥೆ ಹೇಳುತ್ತಿದೆ. ಮೆಟಾದ ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರ್ಮ್ ಬಿಡುಗಡೆಯಾದ ಎರಡು ದಿನಗಳಲ್ಲಿ 100 ಮಿಲಿಯನ್ ಬಳಕೆದಾರರನ್ನು ಹೊಂದಿದ್ದರೂ, ಬಳಕೆಯಲ್ಲಿ ಇಳಿಕೆಯಾಗಿದೆ, ಇದು ಗೂಗಲ್ ಟ್ರೆಂಡ್ಸ್ ನಲ್ಲೂ ಪ್ರತಿಫಲಿತವಾಗಿದ್ದು ಥ್ರೆಡ್ಸ್ ಬಗ್ಗೆ ಜನರಲ್ಲಿ ಆಸಕ್ತಿ ಕ್ಷೀಣಿಸುತ್ತಿದೆ ಇದು ಸಾಕ್ಷಿಯಾಗಿದೆ.

    ಗೂಗಲ್ ಸರ್ಚ್ ಟ್ರಾಫಿಕ್‍ನಲ್ಲಿ ಥ್ರೆಡ್ಸ್ ಸರ್ಚ್‍ನಲ್ಲಿ ಆರಂಭಿಕ ಉಲ್ಬಣವನ್ನು ತೋರಿಸುವ ಗ್ರಾಫ್, ಸಮಯ ಕಳೆದಂತೆ ಇಳಿಯುತ್ತಾ ಬಂದಿದೆ. ಒಂದು ಕಾಲದಲ್ಲಿ 58 ಅಂಕಗಳಿಗೆ ಏರಿದ ಈ ಸಾಲು ಕ್ರಮೇಣ ಕ್ಷೀಣಿಸುತ್ತಾ ಹೋಗಿದೆ. ಜಾಗತಿಕ ಮಟ್ಟದಲ್ಲಿ, ಥ್ರೆಡ್ಸ್ ಒಮ್ಮೆಯೂ ಟ್ವಿಟರ್‍ಅನ್ನು ಮೀರಿಸಲು ಸಾಧ್ಯವಾಗಿಲ್ಲ. ಇದನ್ನು ಗೂಗಲ್‍ ಟ್ರೆಂಡ್ಸ್.ನ ಗ್ರಾಫ್‍ನಲ್ಲಿ ವಿವರಿಸಲಾಗಿದೆ. ಈ ಮಾಹಿತಿ ಬಹಿರಂಗ ಆಗುತ್ತಿದ್ದಂತೆಯೇ, ಟ್ವಿಟರ್ ಬಳಕೆದಾರರ ಗಮನವನ್ನು ಸೆಳೆದಿದೆ. ಅವರು ತಕ್ಷಣ ವಿಶ್ಲೇಷಣೆಯ ಸ್ಕ್ರೀನ್‍ಶಾಟ್‍ಗಳನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)

    ಟ್ವಿಟರ್ ಎದುರು ಸೋಲುತ್ತಿದೆಯಾ ಥ್ರೆಡ್ಸ್? ಆಶ್ಚರ್ಯಕರ ಮಾಹಿತಿ ಬಿಚ್ಚಿಟ್ಟ ಗೂಗಲ್ ಟ್ರೆಂಡ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts