More

    ಶಕ್ತಿ ಯೋಜನೆಗೆ ಬೂಸ್ಟರ್ ಡೋಸ್; ಹೊಸ ಬಸ್‍ಗಳ ಖರೀದಿ ಜತೆಗೆ ಸಿಬ್ಬಂದಿಗಳ ನೇಮಕಾತಿ!

    ಬೆಂಗಳೂರು: ಶಕ್ತಿ ಯೋಜನೆ ಜಾರಿಯಾಗಿ 20ಕ್ಕೂ ಹೆಚ್ಚು ದಿನಗಳು ಕಳೆದಿದ್ದು ರಾಜ್ಯಾದ್ಯಂತ ಮಹಿಳೆಯರು ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ನಡುವೆ, ಶಕ್ತಿ ಯೋಜನೆ ಇದ್ದರೂ ಕೆಲವೆಡೆ ಬಸ್‍ ಇಲ್ಲ ಎಂಬ ಕೂಗು ಕೇಳಿಬಂದಿತ್ತು.

    ಇದನ್ನೂ ಓದಿ: ಜೈನಮುನಿಗಳಿಗೆ ಸರ್ಕಾರ ರಕ್ಷಣೆ ನೀಡಲಿ, ಹಂತಕರಿಗೆ ತಕ್ಕ ಶಿಕ್ಷೆಯಾಗಲಿ: ಡಾ.ಡಿ.ವೀರೇಂದ್ರ ಹೆಗ್ಗಡೆಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ 4 ಸಾವಿರ ಹೊಸ ಬಸ್ ಖರೀದಿ ಹಾಗೂ ಒಟ್ಟು 13 ಸಾವಿರ ಜನರನ್ನು ಸಾರಿಗೆ ಇಲಾಖೆಯಲ್ಲಿ ನೇಮಕಾತಿ ಮಾಡಲು ನಿರ್ಧರಿಸಿರುವುದಾಗಿ ಕಲಾಪದಲ್ಲಿ ಹೇಳಿದ್ದಾರೆ.

    ಈ ನಡುವೆ, ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆ ಬರೆದಿದ್ದ ಪತ್ರದಲ್ಲೂ ಶಕ್ತಿ ಯೋಜನೆಯಿಂದ ಯಾವ ರೀತಿಯಲ್ಲಿ ಮಹಿಳೆಯರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಲಾಭ ಪಡೆಯುತ್ತಿದ್ದಾರೆ ಎನ್ನುವುದು ಉಲ್ಲೇಖವಾಗಿತ್ತು. ಅದನ್ನೂ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಪುನರುಚ್ಚರಿಸಿದ್ದರು.

    ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮಂಡಿಸಿದ 14ನೇ ಬಜೆಟ್​ ಶ್ಲಾಘಿಸಿ ವೀರೇಂದ್ರ ಹೆಗ್ಗಡೆ ಪತ್ರ

    ಸದನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಶಕ್ತಿ ಯೋಜನೆಗೆ ಎಲ್ಲಾ ಮಹಿಳೆಯರು ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವು ಕಡೆ ಉಚಿತ ಪ್ರಯಾಣ ಇದೆ, ಆದರೆ ಬಸ್ ಇಲ್ಲ ಅಂದಿದ್ದಾರೆ. ಅದಕ್ಕಾಗಿ 13 ಸಾವಿರ ಡ್ರೈವರ್, ಕಂಡಕ್ಟರ್, ಮೆಕಾನಿಕ್‌ಗಳ ನೇಮಕಕ್ಕೆ ತೀರ್ಮಾನ ಮಾಡಿದ್ದು ಅದರೊಂದಿಗೆ 4 ಸಾವಿರ ಹೊಸ ಬಸ್ ಖರೀದಿ ಮಾಡುವುದಾಗಿ ನಿರ್ಧರಿಸಲಾಗಿದೆ” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಐತಿಹಾಸಿಕ ಕರಗಕ್ಕೆ ನಾಳೆ ಚಾಲನೆ; ದರ್ಗಾಕ್ಕೂ ತೆರಳಲಿರುವ ಕರಗ; ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಆಗಮನ?

    ಇದೇ ವೇಳೆ ಅವರು ಕರೊನ ಸಮಯದಲ್ಲಿ ಸ್ಥಗಿತಗೊಂಡ ಎಲ್ಲಾ ಮಾರ್ಗಗಳಿಗೂ ಬಸ್ ಸಂಪರ್ಕ ನೀಡುವುದಾಗಿ ಪರಿಷತ್‌ನಲ್ಲಿ ಘೋಷಣೆ ಮಾಡಿದ್ದು ಈ ಮೂಲಕ ಶಕ್ತಿ ಯೋಜನೆಗೆ ಬೂಸ್ಟರ್‍ ಡೋಸ್ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts