More

    ಮಹಿಳೆಯ ಸ್ಥಾನಮಾನ ಹೆಚ್ಚಿಸಿದ ಜವಾಬ್ದಾರಿಗಳು, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಮತ

    ಹುಬ್ಬಳ್ಳಿ: ಮಹಿಳೆ ಇಂದು ಮನೆ ನಿರ್ವಹಣೆಯ ಜತೆಗೆ ಹಣಕಾಸು, ಸರ್ಕಾರಿ ಸೌಲಭ್ಯಗಳ ನಿರ್ವಹಣೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದರಿಂದ ಅವಳ ಸ್ಥಾನಮಾನ, ಗೌರವಗಳು ಹೆಚ್ಚಾಗಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.

    ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಧಾರವಾಡ ಜಿಲ್ಲಾ ಮಟ್ಟದ 17501ನೇ ಪ್ರಗತಿ ಬಂಧು ಸ್ವ&ಸಹಾಯ ಸಂ ಹಾಗೂ ವಿವಿಧ ಸೌಲಭ್ಯಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸ್ವ ಸಹಾಯ ಸಂಗಳ ಗ್ರಾಮೀಣ ಮಹಿಳೆಯರು ಸಹ ಇಂದು ಮೊಬೈಲ್ ಆ್ಯಪ್ ಮುಖಾಂತರ ಹಣಕಾಸಿನ ವ್ಯವಹಾರ ಹಾಗೂ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ಮೂಲಕ ತಂತ್ರಜ್ಞಾನ ಬಳಕೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಧರ್ಮಸ್ಥಳಕ್ಕೆ ಬಂದಾಗ ಮಹಿಳೆಯರ ಸಾಧನೆಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

    ಸ್ವ ಸಹಾಯ ಸಂಗಳಿಗೆ ಇದುವರೆಗೆ 25ಸಾವಿರ ಕೋಟಿ ರೂ. ನೆರವು ನೀಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 250 ಜನರಿಗೆ ಪಿಂಚಣಿ ಕೊಡಲಾಗುತ್ತಿದೆ. ವೃದ್ಧರಿಗೆ ಮನೆ, 2806 ವಿದ್ಯಾಥಿರ್ಗಳಿಗೆ ಶಿಷ್ಯವೇತನ ನೀಡಲಾಗಿದೆ. 308 ಸಮುದಾಯ ಭವನಕ್ಕೆ ಧನಸಹಾಯ ನೀಡಲಾಗಿದೆ. ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಮಾಡಲಾಗುತ್ತಿದೆ. ಸಿರಿಧಾನ್ಯಗಳ ಮೂಲಕ ಆರೋಗ್ಯ ವೃದ್ಧಿಸುವ ಕಾರ್ಯ ಮಾಡಲಾಗುತ್ತಿದೆ. 78ಲಕ್ಷ ಜನರಿಗೆ ಆಯುಷ್ಮಾನ್ ಕಾರ್ಡ್ ಹಾಗೂ 44ಲಕ್ಷ ಜನರಿಗೆ ಇ&ಶ್ರಮ ಕಾರ್ಡ್ ನೀಡಲಾಗಿದೆ ಎಂದು ಡಾ. ಹೆಗ್ಗಡೆ ತಿಳಿಸಿದರು.

    ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ಸ್ವ&ಸಹಾಯ ಸಂಗಳಿಂದ ಮಹಿಳಾ ಸಬಲೀಕರಣವಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಹಳ್ಳಿಯ ದೇವಸ್ಥಾನ, ಕೆರೆ, ಸ್ಮಶಾನ ಅಭಿವೃದ್ಧಿ, ಮನೆಗಳ ನಿರ್ಮಾಣಕ್ಕೆ ಧನಸಹಾಯ ಹಾಗೂ ವಿದ್ಯಾಥಿರ್ಗಳಿಗೆ ವಿದ್ಯಾದಾನ ಮಾಡಲಾಗುತ್ತಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಮಹಾಪೌರ ವೀಣಾ ಬರದ್ವಾಡ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts