More

    ಇಂದಿನಿಂದ ಥಾಮಸ್​ ಕಪ್​ ಬ್ಯಾಡ್ಮಿಂಟನ್​ ಹಣಾಹಣಿ; ಪ್ರಶಸ್ತಿ ಉಳಿಸಿಕೊಳ್ಳಲು ಸಜ್ಜಾದ ಭಾರತ

    ಚೆಂಗ್​ಡು (ಚೀನಾ): ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಹೊಸ ಇತಿಹಾಸ ಬರೆದಿರುವ ಭಾರತದ ಪುರುಷ ಷಟ್ಲರ್​ಗಳ ತಂಡ ಶನಿವಾರ ಆರಂಭಗೊಳ್ಳಲಿರುವ ಪ್ರತಿಷ್ಠಿತ ಥಾಮಸ್​ ಕಪ್​ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದೆ. ಭಾರತ ಈ ಸಲವೂ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲಿದ್ದು, ಮೊದಲ ಪಂದ್ಯದಲ್ಲಿ ಥಾಯ್ಲೆಂಡ್​ ವಿರುದ್ಧ ಸೆಣಸಲಿದೆ.

    ಭಾರತ ತಂಡ ಸಿ ಗುಂಪಿನಲ್ಲಿದೆ. 2022ರ ಆವೃತ್ತಿಯ ಫೈನಲ್​ನಲ್ಲಿ ಭಾರತದ ಎದುರು ಸೋತಿದ್ದ 8 ಬಾರಿಯ ಚಾಂಪಿಯನ್​ ಇಂಡೋನೇಷ್ಯಾದ ಜತೆಗೆ ಇಂಗ್ಲೆಂಡ್​ ಗುಂಪಿನಲ್ಲಿರುವ ಮತ್ತೊಂದು ತಂಡವಾಗಿದೆ. ಪುರುಷರ ವಿಶ್ವ ಚಾಂಪಿಯನ್​ಷಿಪ್​ ಎಂದೇ ಪರಿಗಣಿಸಬಹುದಾದ “ಥಾಮಸ್​ ಕಪ್​’ ಜಯಿಸುವ ಮೂಲಕ ಭಾರತ 2 ವರ್ಷಗಳ ಹಿಂದೆ ಬ್ಯಾಡ್ಮಿಂಟನ್​ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿತ್ತು. ಚೀನಾ ಮತ್ತಿತರ ದೇಶಗಳ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದು ಭಾರತ ಗಮನಸೆಳೆದಿತ್ತು. ಈ ಬಾರಿ ಮತ್ತೆ ಅದೇ ಸಾಧನೆಯನ್ನು ಪುನರಾವರ್ತಿಸುವುದು ಭಾರತಕ್ಕೆ ಅದಕ್ಕಿಂತಲೂ ದೊಡ್ಡ ಸವಾಲು ಎನಿಸಿದೆ. ಯಾಕೆಂದರೆ ಆಗ ನಿರೀೆಗಳ ಭಾರ ಇರಲಿಲ್ಲ. ಆದರೆ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡವೂ ತಂಡದ ಮೇಲಿದೆ.

    ಬ್ಯಾಂಕಾಕ್​ನಲ್ಲಿ ಭಾರತ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಚ್​ಎಸ್​ ಪ್ರಣಯ್​, ಲಕ್ಷ$್ಯ ಸೇನ್​, ಕಿಡಂಬಿ ಶ್ರೀಕಾಂತ್​ ಜತೆಗೆ ಚಿರಾಗ್​ ಶೆಟ್ಟಿ&ಸಾತ್ವಿಕ್​ ಸಾಯಿರಾಜ್​ ಮೇಲೆ ಈ ಸಲವೂ ಹೆಚ್ಚಿನ ನಿರೀೆಗಳಿವೆ. ಪ್ರಿಯಾಂಶು ರಾಜಾವತ್​ ಮತ್ತು ಕಿರಣ್​ ಜಾರ್ಜ್​ ತಂಡದ ಇಬ್ಬರು ಯುವ ತಾರೆಯರಾಗಿದ್ದಾರೆ.

    ಹಾಲಿ ವಿಶ್ವ ಚಾಂಪಿಯನ್​ ಕುನ್​ಲವುತ್​ ವಿಟಿಡ್​ಸರ್ನ್​ ಮತ್ತು ಯುವತಾರೆ ಪನಿತ್​ಚಪೋನ್​ ತೀರರತ್​ಸಕುಲ್​ ಒಳಗೊಂಡ ಥಾಯ್ಲೆಂಡ್​ ಮೊದಲ ಪಂದ್ಯದಲ್ಲೇ ಸವಾಲೊಡ್ಡಲಿದ್ದರೆ, 3ನೇ ಶ್ರೇಯಾಂಕಿತ ಇಂಡೋನೇಷ್ಯಾ ತಂಡವೂ ಇತ್ತೀಚೆಗೆ ಆಲ್​ ಇಂಗ್ಲೆಂಡ್​ ಫೈನಲ್​ನಲ್ಲಿ ಮುಖಾಮುಖಿ ಆಗಿದ್ದ ಜೊನಾಥನ್​ ಕ್ರಿಸ್ಟಿ, ಆಂಥೋನಿ ಗಿನ್​ಟಿಂಗ್​ರಂಥ ಆಟಗಾರರನ್ನು ಒಳಗೊಂಡಿರುವುದರಿಂದ ಕಠಿಣ ಎದುರಾಳಿಯಾಗಿರಲಿದೆ.

    *ಪ್ರಸಕ್ತ ಫಾರ್ಮ್​ನಲ್ಲಿ ಹಾಲಿ ವರ್ಷದ ಟೂರ್ನಿ ಅತ್ಯಂತ ಕಠಿಣವಾಗಿರಲಿದೆ. ಹೆಚ್ಚಿನ ತಂಡಗಳು ಬಲಿಷ್ಠ ಮೂವರು ಸಿಂಗಲ್ಸ್​ ಆಟಗಾರರನ್ನು ಒಳಗೊಂಡಿವೆ. ಜತೆಗೆ ಚೀನಾ, ಡೆನ್ಮಾರ್ಕ್​, ಚೀನಾ ತೈಪೆ, ಜಪಾನ್​, ಇಂಡೋನೇಷ್ಯಾ ತಂಡಗಳು ಬಲಿಷ್ಠ ಡಬಲ್ಸ್​ ಜೊಡಿಯನ್ನೂ ಒಳಗೊಂಡಿವೆ.
    | ಎಚ್​ಎಸ್​ ಪ್ರಣಯ್​

    ಉಬೆರ್​ ಕಪ್​ನಲ್ಲಿ ಭಾರತದ ಯುವ ಷಟ್ಲರ್​ಗಳು ಕಣಕ್ಕೆ
    ಮಹಿಳೆಯರ ಉಬೆರ್​ ಕಪ್​ ಟೂರ್ನಿಯಲ್ಲಿ ಭಾರತ ಈ ಬಾರಿ ಯುವ ಷಟ್ಲರ್​ಗಳ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. ಪ್ಯಾರಿಸ್​ ಒಲಿಂಪಿಕ್ಸ್​ ಪೂರ್ವಸಿದ್ಧತೆಗಾಗಿ ಬಿಡುವು ಪಡೆದಿರುವ ಅನುಭವಿ ಆಟಗಾರ್ತಿ ಪಿವಿ ಸಿಂಧು ಟೂರ್ನಿಯಿಂದ ಹೊರಗುಳಿದಿದ್ದಾರೆ. ಜತೆಗೆ ಡಬಲ್ಸ್​ನಲ್ಲಿ ಪ್ರಮುಖ 2 ಜೋಡಿಗಳಾದ ಅಶ್ವಿನಿ ಪೊನ್ನಪ್ಪ&ತನಿಷಾ ಕ್ರಾಸ್ಟೋ ಮತ್ತು ತ್ರಿಸಾ ಜೋಲಿ&ಗಾಯತ್ರಿ ಗೋಪಿಚಂದ್​ ಕೂಡ ಒಲಿಂಪಿಕ್ಸ್​ನತ್ತ ಗಮನಹರಿಸುವ ಸಲುವಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಭಾರತ ಬಹುತೇಕ ಹೊಸ ಆಟಗಾರ್ತಿಯರೊಂದಿಗೆ ಹೋರಾಟ ನಡೆಸಲಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್​ನಲ್ಲಿ ಮಿಂಚುತ್ತಿರುವ ಅಶ್ಮಿತಾ ಚಾಲಿಹ, ತನ್ವಿ ಶರ್ಮ, ರಾಷ್ಟ್ರೀಯ ಚಾಂಪಿಯನ್​ ಅನ್ಮೋಲ್​ ರ್ಖಬ್​ ತಂಡದ ಪ್ರಮುಖ ಆಟಗಾರ್ತಿಯರಾಗಿದ್ದಾರೆ. ಎ ಗುಂಪಿನಲ್ಲಿರುವ ಮಹಿಳೆಯರ ತಂಡ ಕೆನಡ ವಿರುದ್ಧ ಅಭಿಯಾನ ಆರಂಭಿಸಲಿದೆ. ಅಗ್ರ ಶ್ರೇಯಾಂಕಿತ ಚೀನಾ ಮತ್ತು ಸಿಂಗಾಪುರ ಗುಂಪಿನಲ್ಲಿರುವ 2 ಬಲಿಷ್ಠ ತಂಡಗಳಾಗಿವೆ. ಹೀಗಾಗಿ ಭಾರತದ ಯುವ ತಂಡಕ್ಕೆ ಲೀಗ್​ ಹಂತದಿಂದ ಮೇಲೇರುವುದೇ ಅತ್ಯಂತ ಕಠಿಣ ಸವಾಲೆನಿಸಿದೆ.

    ವಿಶ್ವದ ಅತಿವೇಗದ ಓಟಗಾರ ಉಸೇನ್​ ಬೋಲ್ಟ್​ ಟಿ20 ವಿಶ್ವಕಪ್​ಗೆ ಪ್ರಚಾರ ರಾಯಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts