More

    ಯಶಸ್ವಿಯಾಗಿ ಲಾಂಚ್‍ ಆದ LVM-3 ರಾಕೆಟ್; ಚಂದ್ರನ ಅಂಗಳ ತಲುಪಲು ಎಷ್ಟು ಸಮಯ ಬೇಕು?

    ನವದೆಹಲಿ: ಭಾರತ ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್ಅನ್ನು ಇಂದು (ಶುಕ್ರವಾರ) ಯಶಸ್ವಿಯಾಗಿ ಪ್ರಾರಂಭಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಅಂಗಳ ತಲುಪಲು ಭಾರತದ ಅತಿ ಭಾರವಾದ ರಾಕೆಟ್ ಮಾರ್ಕ್ -3 ಹಾಗೂ LVMನಲ್ಲಿ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದೆ.

    ಇದನ್ನೂ ಓದಿ: ಚಂದ್ರಯಾನ -3 ಯಶಸ್ವಿ ಉಡಾವಣೆ ಹಿಂದಿದ್ದಾರೆ ‘ರಾಕೆಟ್​​​ ಮಹಿಳೆ’ ರಿತು ಶ್ರೀವಾಸ್ತವ

    ಆಗಸ್ಟ್ ಅಂತ್ಯದ ವೇಳೆಗೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಉದ್ದೇಶಿಸಲಾಗಿದ್ದು ಬಾಹ್ಯಾಕಾಶ ನೌಕೆಯು ಸುಮಾರು 3 ತಿಂಗಳುಗಳಲ್ಲಿ 84,000,45 ಕಿಲೋಮೀಟರ್ ದೀರ್ಘ ಪ್ರಯಾಣವನ್ನು ಪೂರ್ಣಗೊಳಿಸಲಿದೆ. ಈ ಯೋಜನೆ ಯಶಸ್ವಿ ಆದಲ್ಲಿ ಭಾರತವು ಅಮೆರಿಕ, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಂತರ ಚಂದ್ರ ಅಂಗಳ ತಲುಪಿದ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ.

    ರಾಕೆಟ್, ಚಂದ್ರನ ಅಂಗಳವನ್ನು ಭಾರತೀಯ ಕಾಲಮಾನದ ಪ್ರಕಾರ ಆಗಸ್ಟ್ 23ರಂದು ಸಂಜೆ ಸುಮಾರು 5.47ಕ್ಕೆ ತಲುಪಲಿದೆ. ಈ ಕುರಿತಾಗಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಗುರುವಾರ ಮಧ್ಯಾಹ್ನ ಲಿಫ್ಟ್ ಆಫ್‍ಗೆ ಕ್ಷಣಗಣನೆ ಪ್ರಾರಂಭವಾಯಿತು. “ಚಂದ್ರಯಾನ -3 ಭಾರತದ ಬಾಹ್ಯಾಕಾಶದ ಸಾಧನೆಯ ಹಾದಿಯಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ. ಇದು ಪ್ರತಿಯೊಬ್ಬ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸುತ್ತದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ಅವಿರತ ಸಮರ್ಪಣೆಗೆ ಸಾಕ್ಷಿಯಾಗಿದೆ. ಅವರ ಉತ್ಸಾಹ ಮತ್ತು ಜಾಣ್ಮೆಗೆ ನಾನು ನಮಸ್ಕರಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಕಿರುಕುಳಕ್ಕೆ ಬೇಸತ್ತು KKRTC ನೌಕರ ಆತ್ಮಹತ್ಯೆಗೆ ಯತ್ನ

    ಚೆನ್ನೈನಿಂದ 3 ಕಿ.ಮೀ ದೂರದಲ್ಲಿರುವ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ LVM 4-M 135 ರಾಕೆಟ್ ಅನ್ನು ಬಾಹ್ಯಾಕಾಶ ವಿಜ್ಞಾನಿಗಳು ‘ಫ್ಯಾಟ್ ಬಾಯ್’ ಎಂದು ಕರೆದಿದ್ದಾರೆ.

    ಆಗಸ್ಟ್ 3ರ ಸುಮಾರಿಗೆ ಚಂದ್ರನ ದಕ್ಷಿಣ ಧ್ರುವದ ಬಳಿ ಲ್ಯಾಂಡರ್ ಮತ್ತು ರೋವರ್ ಅನ್ನು ನಿಯೋಜಿಸಲು ಚಂದ್ರಯಾನ್-3 ಮಿಷನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿಯವರೆಗೆ ಚಂದ್ರನ ದಕ್ಷಿಣ ಧ್ರುವದ ಬಳಿ ಯಾರೂ ಇಳಿದಿಲ್ಲ.

    ಇದನ್ನೂ ಓದಿ: ಚಂದ್ರಯಾನ 3ಗೆ ಬೆಳಗಾವಿಯ ಯುವ ವಿಜ್ಞಾನಿಯ ಕೊಡುಗೆ…! 

    ಚಂದ್ರಯಾನ ಎಂದರೆ ಸಂಸ್ಕೃತದಲ್ಲಿ “ಮೂನ್ ವೆಹಿಕಲ್” ಎಂದರ್ಥ, ಚಂದ್ರನ ದಕ್ಷಿಣ ಧ್ರುವದ ಬಳಿ ರೋವರ್ ಅನ್ನು ನಿಯೋಜಿಸಲು ವಿನ್ಯಾಸಗೊಳಿಸಲಾದ 2 ಮೀಟರ್ ಎತ್ತರದ ಲ್ಯಾಂಡರ್ ಅನ್ನು ಪೇ ಲೋಡ್‍ನಲ್ಲಿ ಇರಿಸಲಾಗಿದೆ. ಅಲ್ಲಿ ಇದು ಎರಡು ವಾರಗಳ ಕಾಲ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಈ ಹಿಂದೆ 202ರಲ್ಲಿ ಇಸ್ರೋದ ಚಂದ್ರಯಾನ್-2 ಮಿಷನ್ ಆರ್ಬಿಟರ್ ಅನ್ನು ಯಶಸ್ವಿಯಾಗಿ ಉಡಾವಣಗೊಳಿಸಿತ್ತು. ಆದರೆ ಇಳಿಯಲು ಪ್ರಯತ್ನಿಸುವಾಗ ಸಂಭವಿಸಿದ ಅಪಘಾತದಲ್ಲಿ ಅದರ ಲ್ಯಾಂಡರ್ ಮತ್ತು ರೋವರ್ ನಾಶವಾಗಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts